ಅರಂತೋಡು ಗ್ರಾಮದ ತೋಟಂಪಾಡಿ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇಂದು ಹಸಿರುವಾಣಿ ಮೆರವಣಿಗೆಗೆ ಅರಂತೋಡು ಶ್ರೀ ದುರ್ಗಮಾತಾ ಭಜನಾ ಮಂದಿರದ ಬಳಿ ಚಾಲನೆ ನೀಡಲಾಯಿತು. ಅರಂತೋಡು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಅಧ್ಯಕ್ಷ ಕೆ.ಆರ್. ಪದ್ಮನಾಭರವರು ಮೆರವಣಿಗೆಗೆ ಚಾಲನೆ ನೀಡಿದರು.