ಓಬಿಸಿ ಮೋರ್ಚಾ ಸಭೆಯಲ್ಲಿಯೂ ಪ್ರತಿಧ್ವನಿಸಿದ ಕಸ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪಕ್ಷದಲ್ಲಿ ಅಶಿಸ್ತು ಸಹಿಸುವುದಿಲ್ಲ : ಕಂಜಿಪಿಲಿ

ನಮ್ಮವರಿಂದಲೇ ರನೌಟ್ ಮಾಡುವ ಪ್ರಯತ್ನ : ವಿನಯ ಕಂದಡ್ಕ

ಸಾಮಾಜಿಕ ಜಾಲತಾಣಗಳಲ್ಲಿ ಬಹುಚರ್ಚೆಯಲ್ಲಿರುವ ನ.ಪಂ.ಆವರಣದಲ್ಲಿರುವ ಘನತ್ಯಾಜ್ಯ ವಿಚಾರ ಬಿ.ಜೆ.ಪಿ. ಓ.ಬಿ.ಸಿ. ಘಟಕದ ವಿಶೇಷ ಸಭೆಯಲ್ಲೂ ಪ್ರಸ್ತಾಪಗೊಂಡಿತು.

ಸಭೆಯಲ್ಲಿ ಮಾತನಾಡಿದ ಬಿ.ಜೆ.ಪಿ.ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು,
” ನಮ್ಮ ಪಕ್ಷದ ಸಾಮಾಜಿಕ ಜಾಲತಾಣದ ಪದಾಧಿಕಾರಿಯೊಬ್ಬರು ಸುಳ್ಯ ನಗರ ಪಂಚಾಯತ್ ಆವರಣದ ಕಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಬಿಜೆಪಿಯಲ್ಲಿ ಒಂದು ಚೌಕಟ್ಟು ಮತ್ತು ಶಿಸ್ತು ಇದೆ. ಈ ಚೌಕಟ್ಟು ಮತ್ತು ಶಿಸ್ತನ್ನು ಯಾರೂ ಮೀರಬಾರದು. ಕಸವನ್ನು ತೆರವು ಮಾಡಲು ನಗರ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ನಗರ ಪಂಚಾಯತ್‌ನ ಕಸವನ್ನು ತೆರವು ಮಾಡಲು ಟೆಂಡರ್ ಪ್ರಕ್ರಿಯೆಯನ್ನು ನಡೆಸಲಾಗಿದೆ. ಸರಕಾರಿ ಕೆಲಸಗಳು ಸರಕಾರದ‌ ನೀತಿ ನಿಯಮದಂತೆ ಮಾಡಬೇಕಾಗಿದೆ. ಅದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಬಿಜೆಪಿ ನಾಯಕರಿಂದ ಜನಪ್ರತಿನಿಧಿಗಳಿಂದ ಏನಾದರೂ ತಪ್ಪುಗಳು ಆಗಿದ್ದಲ್ಲಿ ಅದನ್ನು ಪಕ್ಷದ ವೇದಿಕೆಯಲ್ಲಿ ಹೇಳಬೇಕೇ ಹೊರತು ಕಾರ್ಯಕರ್ತರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪ್ರಚಾರ ಮಾಡುವುದು ಪಕ್ಷದ ಶಿಸ್ತನ್ನು ಮೀರಿದಂತಾಗುತ್ತದೆ. ಈ ರೀತಿಯ ಅಶಿಸ್ತನ್ನು ಪಕ್ಷ ಯಾವತ್ತೂ ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

ರನ್ನೌಟ್ ಮಾಡುವ ಪ್ರಯತ್ನ: ಕಂದಡ್ಕ
ಕಸದ ವಿವಾದವನ್ನು ಪರೋಕ್ಷವಾಗಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ” ವಿವಾದ ಸೃಷ್ಠಿಸಿ ನಮ್ಮವರೇ ನಮ್ಮನ್ನು ರನೌಟ್ ಮಾಡಲು ಪ್ರಯತ್ನಿಸುತ್ತಾರೆ ” ಎಂದು ಹೇಳಿದರು. ” ಅಧಿಕಾರ ಮತ್ತು ರಾಜಕೀಯ ಎಂಬುದು ಒಂದು ಕ್ರಿಕೆಟ್ ಆಟ ಇದ್ದಂತೆ. ಎದುರಾಳಿ ತಂಡದವರು ನಮ್ಮನ್ನು ಔಟ್ ಮಾಡಲು ಪ್ರಯತ್ನಿಸುವುದು ಸಹಜ.. ಆದರೆ ಈಗ ನಮ್ಮವರೇ ನಮ್ಮನ್ನು ‘ರನ್ನೌಟ್’ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ. ನಾವು ಅದನ್ನು ಮೀರಿ ನಿಲ್ಲಬೇಕು ” ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.