Breaking News

ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ-ಓಪರೇಟಿವ್ ಸೊಸೈಟಿ : 2021-22ನೇ ಸಾಲಿನಲ್ಲಿ ಅಮೋಘ ಪ್ರಗತಿಸಾಧನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣಕ್ರೆಡಿಟ್‌ಕೋ-ಓಪರೇಟಿವ್ ಸೊಸೈಟಿಯು 2021-22 ನೇ ಸಾಲಿನಲ್ಲಿ ಹಿಂದಿನ ಸಾಲುಗಳಂತೆ, ತನ್ನೆಲ್ಲಾ ಕಾರ್ಯವಿಭಾಗಗಳಲ್ಲಿ ನಿಗದಿತ ಗುರಿಯನ್ನು ಮೀರಿದ ಸಾಧನೆಯನ್ನು ಮಾಡಿ ಸರ್ವಾಂಗೀಣ ಪ್ರಗತಿಯನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
2021-22ನೇ ಸಾಲಿನಾಂತ್ಯ ದಿನಾಂಕ 31-03-2022 ಕ್ಕೆ ರೂ.374 ಕೋಟಿ ಠೇವಣಾತಿ ಸಂಗ್ರಹಿಸಿದ್ದು, ಹಿಂದಿನ ಸಾಲಿಗಿಂತ ರೂ.65 ಕೋಟಿ ಹೆಚ್ಚಳವಾಗಿ ಶೇ.21ರಷ್ಟು ವೃದ್ಧಿಯನ್ನು ದಾಖಲಿಸಿದೆ. 31-03-2022ಕ್ಕೆ ಸಂಘದ ಹೊರಬಾಕಿ ಸಾಲವು ರೂ.316 ಕೋಟಿಯಾಗಿದ್ದು ಇದು ಹಿಂದಿನ ಸಾಲಿಗಿಂತ ರೂ.64 ಕೋಟಿ ಹೆಚ್ಚಳವಾಗಿ ಶೇ.26ರಷ್ಟು ವೃದ್ಧಿಯಾಗಿದೆ. ಠೇವಣಿ ಮತ್ತು ಸಾಲ ಸೇರಿದಂತೆ ಸಂಘದಒಟ್ಟು ವ್ಯವಹಾರವು ವರ್ಷಾಂತ್ಯ31-02-2022 ಕ್ಕೆ ರೂ.690 ಕೋಟಿ ಮೀರಿದ್ದು ಹಿಂದಿನ ಸಾಲಿಗಿಂತ ರೂ.129 ಕೋಟಿಯಷ್ಟು ಹೆಚ್ಚಳಗೊಂಡು, ಶೇ.23 ರಷ್ಟು ವೃದ್ಧಿಯನ್ನು ಕಂಡಿದೆ. ಇದರೊಂದಿಗೆ ಸಂಘವು 2021-22 ನೇ ಸಾಲಿನಲ್ಲಿ ರೂ.2348 ಕೋಟಿ ಮೀರಿದ ವಾರ್ಷಿಕ ವಹಿವಾಟನ್ನು (Annual Turnover) ದಾಖಲಿಸಿದೆ.


ಸಂಘವು ೨೦೨೧-೨೨ನೇ ಸಾಲಿನಲ್ಲಿ ಗಳಿಸಿದ ಆದಾಯ ರೂ.೪೧.೯೨ ಕೋಟಿಯಲ್ಲಿ ಖರ್ಚು ವೆಚ್ಚಗಳನ್ನು ಭರಿಸಿಕೊಂಡು ವರ್ಷಾಂತ್ಯ ೩೧.೦೩.೨೦೨೨ಕ್ಕೆ ರೂ.೯ ಕೋಟಿ ಮೀರಿದ ನಿವ್ವಳ ಲಾಭವನ್ನು ಗಳಿಸಿದ್ದು ಇದು ಕಳೆದ ವರ್ಷಕ್ಕಿಂತ ರೂ.೧.೭೩ ಕೋಟಿಯಷ್ಟು ಹೆಚ್ಚಳದೊಂದಿಗೆ ಶೇ.೨೩ ವೃದ್ಧಿಯಾಗಿದೆ. ಸಂಘದ ಒಟ್ಟು ಹೊರಬಾಕಿ ಸಾಲ ರೂ.೩೧೬ ಕೋಟಿ ಪೈಕಿ ರೂ.೧೪ ಲಕ್ಷದಷ್ಟು ಮಾತ್ರ ಎನ್.ಪಿ.ಎ.ಯಾಗಿದ್ದು, ಇದು ಹೊರಬಾಕಿ ಸಾಲದ ಶೇ.೦.೦೫ಕ್ಕೆ ಸೀಮಿತಗೊಂಡಿದೆ, ಮಾತ್ರವಲ್ಲದೆ ನಿವ್ವಳ ಎನ್.ಪಿ.ಎ.ಯು ಕಳೆದ ೧೫ ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿರುವುದು ಸಂಘದ ಈ ಅಮೋಘ ಪ್ರಗತಿ ಸಾಧನೆಯ ವಿಶೇಷತೆಯಾಗಿದೆ.
ಸಂಘದ ಕಾರ್ಯವ್ಯಾಪ್ತಿಯಾದ ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ೨೫ ಶಾಖೆಗಳನ್ನು ಹೊಂದಿ ಸದಸ್ಯರ ಸೇವೆಯಲ್ಲಿ ನಿರತವಾಗಿದೆ. ೧೯೯೪ರಲ್ಲಿ ಸ್ಥಾಪನೆಯಾದ ಸಂಸ್ಥೆಯು, ಈ ೨೮ ವರ್ಷಗಳ ಅವಧಿಯಲ್ಲಿ ರೂ.೬೯೦ ಕೋಟಿ ಮಿಕ್ಕಿದ ಒಟ್ಟು ವ್ಯವಹಾರವನ್ನು ಹೊಂದಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಪ್ರಥಮ ಕ್ರೆಡಿಟ್ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಘದ ಸರ್ವಾಂಗೀಣ ಪ್ರಗತಿಗೆ ದ್ಯೋತಕವಾಗಿ ೪ ಬಾರಿ ರಾಜ್ಯ ಸರ್ಕಾರದಿಂದ ರಾಜ್ಯ ಮಟ್ಟದ ಹಾಗೂ ೧೦ ಬಾರಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ಭಾಜನವಾಗಿದೆ.
ಸಂಘವು ಸಿಬ್ಬಂದಿಗಳಿಗೆ ಉತ್ತಮ ವೇತನದೊಂದಿಗೆ, ಗ್ರಾಚ್ಯುಟಿ, ವಿಮಾ ಸಂರಕ್ಷಣೆ ಮುಂತಾದ ಸೇವಾ ಸೌಲಭ್ಯಗಳನ್ನು ಕಲ್ಪಿಸಿದೆ. ಸಂಘವು ಮುಂದಿನ ಎರಡು ವರ್ಷಗಳೊಳಗೆ ಕೇಂದ್ರ ಕಛೇರಿಗೆ ಸುಸಜ್ಜಿತ ನೂತನ ಸ್ವಂತ ಕಟ್ಟಡವನ್ನು ಹೊಂದುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ೨೦೨೫ಕ್ಕೆ ಮಾರ್ಚ್‌ಗೆ ರೂ.೧೦೦೦ ಕೋಟಿ ಒಟ್ಟು ವ್ಯವಹಾರ ರೂ.೧೦ ಕೋಟಿ ನಿವ್ವಳ ಲಾಭ ಹಾಗೂ ೩೦ ಶಾಖೆಗಳನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದ್ದು ಇದನ್ನು ಸಾಧಿಸುವ ನಿಟ್ಟಿನಲ್ಲಿ ಸಂಘವು ಪ್ರಗತಿಯ ಪಥದಲ್ಲಿ ದೃಢ ಹೆಜ್ಜೆಯನ್ನು ಇಟ್ಟಿರುತ್ತದೆ. ಸಂಘವು ಹೊಂದಿರುವ ೭೯೦೦೦ಕ್ಕೂ ಮಿಕ್ಕಿದ ಸಂತೃಪ್ತ ಠೇವಣಿದಾರ ಹಾಗೂ ಸಾಲಗಾರ ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪರಿಶ್ರಮಗಳು ಸಂಘದ ಈವರೆಗಿನ ಸಾಧನೆಗೆ ಕಾರಣವಾಗಿದ್ದು, ಇವರೆಲ್ಲರ ಸಹಕಾರದೊಂದಿಗೆ ಸಂಘವು ಮುಂದಿನ ಗುರಿಗಳನ್ನು ಖಂಡಿತವಾಗಿ ಸಾಧಿಸುವುದು ಎಂದು ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರು ಆಶಯವನ್ನು ವ್ಯಕ್ತಪಡಿಸಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.