Breaking News

ಮೇ.16-24 : ತೋಟಗಾರಿಕೆ ಇಲಾಖೆ ವತಿಯಿಂದ ಮಾಹಿತಿ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

2022-23 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಡಿಕೆ ಹಳದಿ ಎಲೆ ರೋಗದ ನಿಯಂತ್ರಣಕ್ಕೆ ಸಂಶೋಧನೆ ಹಾಗೂ ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹಧನ ಕಾರ್ಯಕ್ರಮದಡಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುವುದು. ಅಡಿಕೆ ಬೆಳೆಗಾರರು ಇತರೆ ಬೆಳೆಗಳಾದ ಬಾಳೆ, ತೆಂಗು, ಕೊಕ್ಕೋ, ಕಾಳುಮೆಣಸು, ಜಾಯಿಕಾಯಿ, ರಾಂಬೂಟನ್, ತಾಳೆ ಹಾಗೂ ಇತರೆ ಬೆಳೆಗಳನ್ನು ಬೆಳೆಯಬಹುದು.

ಪರ್ಯಾಯ ಬೆಳೆಗಳನ್ನು ಬೆಳೆಯಲು ಆಸಕ್ತಿ ಹೊಂದಿರುವ ಫಲಾನುಭವಿಗಳಿಗೆ MGNREGA ಯಡಿ ನಿಗದಿಯಾಗಿರುವ ಘಟಕ ವೆಚ್ಚದ ಶೇ. 50ರಷ್ಟು ಸಹಾಯಧನ ನೀಡಲಾಗುವುದು. ಪ್ರತೀ ಫಲಾನುಭವಿಗೆ ಕನಿಷ್ಟ 0.2 ಹೆ. ನಿಂದ ಗರಿಷ್ಟ 4 ಹೆ. ವರೆಗೆ ಮಿತಿಗೊಳಿಸಿ ಸಹಾಯಧನ ನೀಡಲಾಗುವುದು. ಈ ನಿಟ್ಟಿನಲ್ಲಿ ಯೋಜನೆಯ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಗ್ರಾಮ ಪಂಚಾಯತ್ ಮೂಲಕ ಕೆಳಕಂಡ ದಿನಾಂಕಗಳಂದು ಹಮ್ಮಿಕೊಳ್ಳಲಾಗಿದೆ.
16/05/2022 :  ಪೂರ್ವಾಹ್ನ : ಕೊಡಿಯಾಲ ಗ್ರಾಮ ಪಂಚಾಯತ್ ಸಭಾಭವನ
18/05/2022 :  ಪೂರ್ವಾಹ್ನ : ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸಭಾಭವನ
                            ಅಪರಾಹ್ನ : ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸಭಾಭವನ
19/05/2022 :  ಪೂರ್ವಾಹ್ನ : ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನ
                            ಅಪರಾಹ್ನ : ಅರಂತೋಡು ಗ್ರಾಮ ಪಂಚಾಯತ್ ಸಭಾಭವನ
20/05/2022 :  ಪೂರ್ವಾಹ್ನ : ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಸಭಾಭವನ
23/05/2022 :  ಪೂರ್ವಾಹ್ನ : ಆಲೆಟ್ಟಿ ಗ್ರಾಮ ಪಂಚಾಯತ್ ಸಭಾಭವನ
24/05/2022 :  ಪೂರ್ವಾಹ್ನ : ಮರ್ಕಂಜ
                             ಅಪರಾಹ್ನ : ಮಡಪ್ಪಾಡಿ
ಅಡಿಕೆ ಹಳದಿ ಎಲೆ ರೋಗ ಬಾಧಿತ ಪ್ರತಿಯೊಬ್ಬ ರೈತರೂ ಈ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಜನೆಯ ಅನುಷ್ಟಾನಕ್ಕಾಗಿ ಸಹಕರಿಸುವಂತೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.