ಅಜ್ಜಾವರ ಗ್ರಾಮದ ಮುಳ್ಯ ದಿ|ಕೃಷ್ಣಪ್ಪ ರವರ ಪತ್ನಿ ಸುಂದರಿ (65) ಎಂಬವರು ಮನೆಯ ಸಮೀಪದ ಗೇರು ಬೀಜದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರೆಂದೂ ಹೇಳಲಾಗುತ್ತಿದೆ. ಮೇ.13 ರಂದು ಮಧ್ಯಾಹ್ನ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೇಟೆಗೆ ಹೋಗಿದ್ದ ಅವರ ಮಗ ಸತೀಶರು ಮನೆಗೆ ಬಂದಾಗ ತಾಯಿ ಇರಲಿಲ್ಲ. ಹುಡುಕಾಡಿದಾಗ ಅವರು ನೇಣು ಹಾಕಿಕೊಂಡಿರುವುದು ಕಂಡು ಬಂತು.
ಮೃತರು ಪುತ್ರ, ಪುತ್ರಿಯರಾದ ನಳಿನಾಕ್ಷಿ,ಜಯಂತಿ,ಮೀನಾಕ್ಷಿ, ಸೌಮ್ಯ ರವರನ್ನು ಅಗಲಿದ್ದಾರೆ.