ವಿವೇಕ ಜಾಗ್ರತ ಬಳಗ ಸುಳ್ಯ ಹಾಗೂ ಮಧ್ಯ ವಲಯ-3 ಬಳಗಳ ವತಿಯಿಂದ ಯೋಗ ಕಹಳೆ ವಿಶೇಷ ಸತ್ಸಂಗ ಕಾರ್ಯಕ್ರಮವು ಮೇ.22 ರಂದು ಬೆಳಿಗ್ಗೆ ಗಂಟೆ 11 .00 ರಿಂದ 1.00 ರ ತನಕ ಸುಳ್ಯ ಓಡಬಾಯಿ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಲಿದೆ.
ಕೋಟ ಮೂಡುಗಿಳಿಯಾರು ಯೋಗಬನ ವೈದ್ಯಕೀಯ ನಿರ್ದೇಶಕರು ಮತ್ತು ಸರ್ವಕ್ಷೇಮ ಆಸ್ಪತ್ರೆ ಹಾಗೂ ಸಂಶೋಧನಾ ಪ್ರತಿಷ್ಠಾನ ಇದರ ಸಿಇಒ ಡಾ.ವಿವೇಕ ಉಡುಪರು ಚಿಂತನಕಾರರಾಗಿ ಭಾಗವಹಿಸಲಿದ್ದಾರೆ.
ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಹಲವಾರ ಜನ ಗಣ್ಯರು ಭಾಗವಹಿಸಲಿದ್ದಾರೆ. ಕಳೆದ 30 ವರ್ಷಗಳಿಂದ ವಿವೇಕ ಜಾಗ್ರತ ಬಳಗ ಸುಳ್ಯ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದೆ.