ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ಗೆ 40 ವರ್ಷ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ವಾರ್ಷಿಕ ಸಭೆ ಮಹಾಸಭೆ ಅಧ್ಯಕ್ಷರಾಗಿ ಲತೀಫ್ ಹರ್ಲಡ್ಕ ಪುನರಾಯ್ಕೆ

40ನೇ ವರ್ಷಕ್ಕೆ 40 ಸಮಾಜಮುಖಿ ಕಾರ್ಯಗಳನ್ನು ಮಾಡುವ ಚಿಂತನೆ

ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಎಲಿಮಲೆ ಇದರ ವಾರ್ಷಿಕ ಮಹಾಸಭೆಯು ಎಲಿಮಲೆ ಮದರಸ ವಠಾರದಲ್ಲಿ ಜರುಗಿತು.


ಶುಕ್ರವಾರ ಜುಮ್ಮಾ ನಮಾಜಿನ ಬಳಿಕ ನಡೆದ ಮಹಾಸಭೆಯನ್ನು ಸಂಸ್ಥೆಯ ಉಪಾಧ್ಯಕ್ಷ ಸೂಫಿ ಮುಸ್ಲಿಯಾರ್ ಉದ್ಘಾಟಿಸಿದರು. ಸಿದ್ದೀಕ್ ಎಲಿಮಲೆ ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಎಲಿಮಲೆ ಜಮಾಅತ್ ಸಮಿತಿ ಅಧ್ಯಕ್ಷ ಮಹಮದ್ ಇಕ್ಬಾಲ್ ಎಲಿಮಲೆ, ಜಮಾಅತ್ ಸಮಿತಿ ಮಾಜಿ ಅಧ್ಯಕ್ಷ ಮೂಸ ಹಾಜಿ ಜೀರ್ಮುಕಿ, ಕೋಶಾಧಿಕಾರಿ ಮಹಮೂದ್ ಮಸ್ಲಿಯಾರ್ ದೊಡ್ಡಂಗಡಿ,ಜೀರ್ಮುಕಿ ಮಸೀದಿ ಅಧ್ಯಕ್ಷ ಸಿದ್ದೀಕ್ ಜೀರ್ಮುಕಿ,ಮಹಮದ್ ಕುಂಞಿ ಮೇಲೆಬೈಲು ಉಪಸ್ಥಿತರಿದ್ದರು. ಎಲಿಮಲೆ ಮಸೀದಿ ಮುದರ್ರಿಸ್ ಜೌಹರ್ ಅಹ್ಸನಿ ದುವಾಶಿರ್ವಚನ ನೆರವೇರಿಸಿ ಹಿತೋಪದೇಶ ನೀಡಿದರು.

 

ನೂತನ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಲತೀಫ್ ಹರ್ಲಡ್ಕ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಜಿ.ಎಸ್. ಅಬ್ದುಲ್ಲ, ಸೂಫಿ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಸೂಫಿಎಲಿಮಲೆ, ಜತೆ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಅಶ್ರಫ್ ದಿನಸಿ ಬಜಾರ್, ಕೋಶಾಧಿಕಾರಿಯಾಗಿ ಅಬ್ದುಲ್ ಕಾದರ್ ಪಾಣಾಜೆ ರವರು ಆಯ್ಕೆಯಾದರು.


ಸದಸ್ಯರುಗಳಾಗಿ ಶಿಹಾಬ್ ಪಾಣಾಜೆ, ಹೈದರ್ ಹಾಜಿ,ಅಬ್ದುಲ್ ಖಾದರ್ ಅತ್ತಿಮಾರಡ್ಕ ,ಹನೀಫ್ ಜೀರ್ಮುಕ್ಕಿ,ಸುಲೈಮಾನ್ ಮೆತ್ತಡ್ಕ,ಮಹಮೂದ್ ಸಖಾಫಿ,ನಾಸಿರ್ ದೊಡ್ಡಂಗಡಿ, ಇಬ್ರಾಹಿಂ ಜೀರ್ಮುಕ್ಕಿ,ಸತ್ತಾರ್ ಮೇಲೆಬೈಲು,ಹಾರಿಸ್ ಪಳ್ಳಿಕಲ್, ಆಸಿಫ್ ಹೊಟ್ಟಿಚೋಡಿ ಆಯ್ಕೆಯಾದರು. ಸಮಿತಿಯ ಗೌರವ ಸಲಹೆಗಾರರಾಗಿ ಅಲ್ ಹಾಜ್ ತೌಸೀಫ್ ಸಅದಿ, ಮಹಮದ್ ಇಕ್ಬಾಲ್ ಎಲಿಮಲೆ, ಅಬೂಬಕರ್ ಪಾಣಾಜೆ, ಮಹಮದ್ ಕುಂಞಿ ಮೇಲೆಬೈಲು ರವರನ್ನು ಆರಿಸಲಾಯಿತು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲತೀಫ್ ಹರ್ಲಡ್ಕರವರು ನುಸ್ರತ್ ಗೆ ೪೦ ನೇ ವರ್ಷ ತುಂಬಿದ್ದು ಸಂಸ್ಥೆಯ ರೂಬಿ ಜ್ಯುಬಿಲಿ ಕಾರ್ಯಕ್ರಮದ ಬಗ್ಗೆ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಇದರ ಯಶಸ್ವಿಗಾಗಿ ಸರ್ವರ ಸಹಭಾಗಿತ್ವ ಮತ್ತು ಸಹಕಾರ ಅಗತ್ಯ ಅದರಿಂದ ಕಾರ್ಯಕ್ರಮಗಳ ಯಶಸ್ವಿಗೆ ಸಹಕರಿಸಲು ವಿನಂತಿಸಿದರು. ಸೂಫಿ ಎಲಿಮಲೆ ಸ್ವಾಗತಿಸಿ ವಂದಿಸಿದರು .

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.