ಕೆ.ವಿ.ಜಿ. ವಿವಿಧೋದ್ದೇಶ ಸೌಹಾರ್ದ ಸಹಕಾರಿಗೆ ಗೌರವ ಸಲಹೆಗಾರರ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೆ.ವಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ವಿದ್ಯಾರ್ಥಿಗಳ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ 31.12.2009ರಲ್ಲಿ ಕೆ.ವಿ.ಜಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ (ನಿ.) ಸ್ಥಾಪಿಸಲ್ಪಟ್ಟಿತ್ತು. ಇದರ ಸ್ಥಾಪಕ ಅಧ್ಯಕ್ಷರಾಗಿ ಅಕಾಡೆಮಿ ಆಫ್ ಲಿಬರಲ್‌ಎಜ್ಯುಕೇಶನ್ (ರಿ.) ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ., ಉಪಾಧ್ಯಕ್ಷರಾಗಿ ಚಿದಾನಂದ ಗೌಡ ಬಾಳಿಲ ಸೇರಿದಂತೆ 17 ಜನರ ಆಡಳಿತ ಸದಸ್ಯರು ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯ ದಶಮಾನೋತ್ಸವದ ಸವಿ ನೆನಪಿಗಾಗಿ ಮತ್ತು ಸಾರ್ವಜನಿಕರಿಗೂ ಅನುಕೂಲವಾಗುವ ದೃಷ್ಠಿಯಿಂದ ಸುಳ್ಯ ನಗರದ ಕೇಂದ್ರ ಭಾಗದಲ್ಲಿ ಶಾಖೆಯೊಂದನ್ನು ತೆರೆದು ಸೇವೆ ಸಲ್ಲಿಸುತ್ತಿದೆ.

ಸಂತೋಷ್ ಕುತ್ತಮೊಟ್ಟೆ

ಮುಂದಿನ ದಿನಗಳಲ್ಲಿ ಈ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆಯುವಲ್ಲಿ ಅನುಭವಿ ಗೌರವ ಸಲಹೆಗಾರರಾಗಿ ಅರಂತೋಡು, ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕೆನರಾ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕರಾದ ಕೆ.ಆರ್. ಮನಮೋಹನ್, ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷ ಸಂತೋಷ್‌ಜಾಕೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಟಿ.ಎ.ಪಿ.ಸಿ.ಎಂ.ಎಸ್. ನ ಉಪಾಧ್ಯಕ್ಷ ಪಿ.ಎಸ್. ಗಂಗಾಧರ ಮತ್ತು ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ನಿರ್ದೇಶಕರಾದ ಎಸ್.ಆರ್ ಸೂರಯ್ಯನವರನ್ನು ಆಯ್ಕೆಮಾಡಲಾಗಿದೆ. ಇವರುಗಳ ಸಲಹೆ, ಸೂಚನೆ ಮಾರ್ಗದರ್ಶನ ಹಾಗೂ ನೂತನ ಯೋಜನೆ, ಯೋಚನೆಗಳೊಂದಿಗೆ ಮುಂದೆ ಇನ್ನೂ ಹೆಚ್ಚಿನ ಸೇವೆಯನ್ನು ಶಿಕ್ಷಣ ಸಂಸ್ಥೆಗಳ ನೌಕರರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀಡುವುದಾಗಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದಡಾ. ರೇಣುಕಾಪ್ರಸಾದ್ ಕೆ.ವಿ.ಯವರು ಮುಂದಿನ ದಿನಗಳಲ್ಲಿ ಇವರ ಮಾರ್ಗದರ್ಶನಗಳೊಂದಿಗೆ ಸಹಗೂಡಿ ಸಂಸ್ಥೆಯ ಶಾಖೆಗಳನ್ನು ತೆರೆಯುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                                           ಜಯಪ್ರಕಾಶ್ ಕುಂಚಡ್ಕ

                                           ಕೆ.ಆರ್. ಮನಮೋಹನ್

                                                  ಪಿ.ಎಸ್. ಗಂಗಾಧರ

                                           ಸಂತೋಷ್‌ ಜಾಕೆ

                                      ಎಸ್.ಆರ್. ಸೂರಯ್ಯ

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.