ಮರ್ಕಂಜ ಗ್ರಾಮದಲ್ಲಿರುವ ಭ.ಆದೀಶ್ವರ ಸ್ವಾಮಿ ಬಸದಿ ಬಲ್ನಾಡುಪೇಟೆ ಇದರ 8 ನೇ ವರುಷದ ಧಾಮಸಂಪ್ರೋಕ್ಷಣ ವಾರ್ಷಿಕೋತ್ಸವವು ಮೇ.. 11 ರಂದು ನೆರವೇರಿತು.
ಪ್ರತಿಷ್ಟಾಚಾರ್ಯ ಜಯರಾಜ ಇಂದ್ರ ನೇತೃತ್ವದಲ್ಲಿ ಬೆಳಗ್ಗೆ ತೋರಣ ಮಹೂರ್ತವಾಗಿ ವಿಮಾನ ಪೂಜೆ, ಜಿನ ಮಂದಿರದ ಮೇಲಿನ ನೆಲೆಯ ಭ.1008 ಪಾರ್ಶ್ವನಾಥ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ, ಬಸದಿಯ ಮೂಲ ನಾಯಕ ಭ.1008 ಆದಿನಾಥ ತೀರ್ಥಂಕರರಿಗೆ 108 ಕಳಶಗಳ ಅಭಿಷೇಕ,ಉತ್ಸವ ಬಲಿ ಸಹಿತ ಬ್ರಹ್ಮಯಕ್ಷ ಹಾಗೂ ಜಗನ್ಮಾತೆ ಪದ್ಮಾವತಿ ದೇವಿಗೆ ವಿಶೇಷ ಅಲಂಕಾರ ಪೂಜೆ,ಕ್ಷೇತ್ರಪಾಲ ಪೂಜೆಯ ಆಗಮೋಕ್ತವಾಗಿ ನೇರವೇರಿಸಲಾಯಿತು.
ಬಸದಿಯ ಆಡಳಿತ ಮೊಕ್ತೆಸರರಾದ ಯುವರಾಜ ಶೆಟ್ಥಿ ಹಾಗೂ ಬಸದಿಯ ಆಡಳಿತ ಮಂಡಳಿ ಅಧ್ಯಕ್ಷ ನಾಗಕುಮಾರ್ ಶೆಟ್ಟಿ ಮತ್ತು ಸಹೋದರರು ವಿಧಿವಿಧಾನಗಳಲ್ಲಿ ಪಾಲ್ಗೊಂಡರು ಹಾಗೂ ಬಸದಿಯ ಲಕ್ಷಹೂವಿನ ಸೇವಾಕರ್ತರಾದ ಶ್ರೀಮತಿ ಹರಿಣಿ ಮತ್ತು ಪದ್ಮನಾಭ ಶೆಟ್ಟಿ ಬಲ್ನಾಡುಪೇಟೆ ಇವರ ಕುಟುಂಬಿಕರಿಂದ ಪದ್ಮಾವತಿ ದೇವಿಗೆ ವಿಶೇಷ ಷೋಡಶೋಪಚಾರ ಆರಾಧನೆ ನಡೆಸಲಾಯಿತು.
ಪ್ರತಿ ವರುಷದ ವಾರ್ಷಿಕೋತ್ಸವದಲ್ಲಿ ಜಿನ ಮಂದಿರಕ್ಕೆ ಶಾಶ್ವತ ಕೊಡುಗೆ ನಿರ್ಮಾಣ ಮಾಡುವ ಸಂಕಲ್ಪದಂತೆ 2020-21 ನೇ ಸಾಲಿನಲ್ಲಿ ಬಸದಿಯ ಮುಂಭಾಗದಲ್ಲಿ ನಿರ್ಮಿಸಲಾದ ಶಾಶ್ವತ ಮೇಲ್ಚಾವಣಿಯನ್ನು ಪ್ರತಿಷ್ಟಾಚಾರ್ಯ ಜಯರಾಜ ಇಂದ್ರ ಇವರು ಉದ್ಘಾಟಿಸಿದರು. ಪದ್ಮನಾಭ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಭಾತ್ ಜೈನ್ ಬಲ್ನಾಡುಪೇಟೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಿದ್ಯಾಕುಮಾರ್ ಬಲ್ನಾಡು ಪೇಟೆ ಬಸದಿಯ ಕುರಿತ ಆಶಯ ನುಡಿಗಳನ್ನಾಡಿದರು. ಪ್ರತಿಷ್ಟಾಚಾರ್ಯ ಶ್ರೀ ಜಯರಾಜ ಇಂದ್ರ ರವರು ಶುಭ ಹಾರೈಸಿದರು. ಆಡಳಿತ ಮೊಕ್ತೆಸರ ಯುವರಾಜ ಶೆಟ್ಟಿಯವರು ಶುಭ ಹಾರೈಸಿದರು. ಪ್ರದೀಪ್ ಜೈನ ವಂದಿಸಿದರು. ಸಮಾರಂಭದಲ್ಲಿ ಆಡಳಿತ ಮೋಕ್ತೆಸರರ ಯುವರಾಜ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ನಾಗಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಆಡಳಿತ ಮಂಡಲಿಯ ಖಜಾಂಚಿ ಶುಭಾಶ್ಚಂದ್ರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹಾವೀರ್ ಜೈನ್, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ವಿದ್ಯಾಕುಮಾರ್ ಜೈನ್,ವಾರ್ಷಿಕೋತ್ಸವ ಸಮಿತಿಯ ಖಜಾಂಚಿ ಪ್ರಭಾತ್ ಜೈನ್ , ಕುಟುಂಬದ ಹಿರಿಯರಾದ ಹೇಮಾವತಿ ಅಮ್ಮನವರು,ನೇಮಿರಾಜ್ ಶೆಟ್ಟಿ, ಜಗದೀಶ್ ಪಡಿವಾಳ್ ಹಾಗೂ ಬಸದಿಯ ಮುಖ್ಯ ಪುರೋಹಿತರಾದ ಮಹಾವೀರ ಇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭಗಳಲ್ಲಿ ಮೇಲ್ಚಾವಣಿ ನಿರ್ಮಿಸಲು ಸಹಕರಿಸಿದ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು. ಮೇಲ್ಚಾವಣಿ ನಿರ್ಮಾಣದ ನೇತೃತ್ವ ವಹಿಸಿದ ಮಹಾವೀರ ಜೈನ್ ಹಾಗೂ ಮೇಲ್ಚಾವಣಿ ನಿರ್ಮಾಣ ಸೇವೆಯಲ್ಲಿ ವಿಶೇಷವಾಗಿ ಕೊಡುಗೆ ನೀಡಿದ ಪ್ರದೀಪ್ ಜೈನ್ ರವರನ್ನು ಸನ್ಮಾನಿಸಲಾಯಿತು.
ಜಿನ ಮಂದಿರದ ಮೇಲ್ಚಾವಣಿಯನ್ನು ನಿರ್ಮಿಸಿಕೊಟ್ಟ ಹೇಮಕುಮಾರ್ ಕೊರ್ತುಗೋಳಿಯವರನ್ನು ಸನ್ಮಾನಿಸಲಾಯಿತು.
ವಾರ್ಷಿಕೋತ್ಸವ ಕಾರ್ಯದರ್ಶಿ ಸುಕೇಶ್ ಜೈನ್ ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಬಲ್ನಾಡುಪೇಟೆ ಸಮಸ್ತ ಕುಟುಂಬಸ್ಥರ ಸಹಿತ ಊರ ಪರವೂರಿನ ಭಕ್ತಾದಿಗಳು ಭಾಗವಹಿಸಿದರು.