ಅರಂತೋಡಿನ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಇದರ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಿದ ಅನ್ವಾರುಲ್ ಹುಧಾ ಶಾದಿಮಹಲ್ ಉದ್ಘಾಟನೆ ಮೇ.20 ರಂದು ಅಪರಾಹ್ನ 4ಕ್ಕೆ ಅರಂತೋಡಿನ ಉದಯನಗರದಲ್ಲಿ ನಡೆಯಲಿದೆ ಎಂದು ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ನ ಅಧ್ಯಕ್ಷ ಎಸ್.ಎಂ.ಅಬ್ದುಲ್ ಮಜೀದ್ ಸಿಟಿ ಮೆಡಿಕಲ್ ತಿಳಿಸಿದ್ದಾರೆ.
ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಅಲ್ಹಾಜಿ ಇಸಾಕ್ ಬಾಖವಿ ದುವಾಃ ನೆರವೇರಿಸುವರು. ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್ ಶಾದಿಮಹಲ್ನ ಉದ್ಘಾಟನೆ ನೆರವೇರಿಸುವರು. ನೂತನ ಸಭಾಂಗಣವನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ನೆರವೇರಿಸುವರು.
ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ನ ಗೌರವಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು. ನಾಮಫಲಕವನ್ನು ವಿಧಾನ ಪರಿಷತ್ ಸದಸ್ಯ ಹಾಗು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಅನಾವರಣಗೊಳಿಸುವರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಮೂಸಾನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅನ್ವಾರುಲ್ ಹುಧಾ ಯಂಗ್ಮೆನ್ಸ್ ಎಸೋಸಿಯೇಶನ್ನ ಸ್ಥಾಪಕ ಅಧ್ಯಕ್ಷ ಹಾಜಿ ಟಿ.ಎಂ.ಬಾಬ ತೆಕ್ಕಿಲ್, ಸ್ಥಾಪಕ ಕಾರ್ಯದರ್ಶಿ ಹಾಜಿ ಅಹಮ್ಮದ್ ಕುಂಞಿ ಪಟೇಲ್ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ದ್ಸಿಕೃಸಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್, ಎಸ್ಕೆಎಸ್ಎಸ್ಎಫ್ ಅಧ್ಯಕ್ಷ ಆಶಿಕ್ ಕುಕ್ಕುಂಬಳ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸರಕಾರದ ಅನುದಾನ ಹಾಗು ದಾನಿಗಳ ನೆರವಿನಿಂದ ಸುಮಾರು ೮೦ ಲಕ್ಷ ರೂ ವೆಚ್ಚದಲ್ಲಿ ಶಾದಿಮಹಲ್ ನಿರ್ಮಿಸಲಾಗಿದೆ. ಮುಂದೆ ಅತೀ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಮದುವೆ ಮತ್ತಿತರ ಸಮಾರಂಭಗಳಿಗೆ ಶಾದಿಮಹಲ್ ಲಭ್ಯವಾಗಲಿದೆ ಎಂದು ಅಬ್ದುಲ್ ಮಜೀದ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಅನ್ವರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ನ ನಿರ್ದೇಶಕರಾದ ಎ.ಹನೀಫ ಜುಬೇರ್ ಉಪಸ್ಥಿತರಿದ್ದರು.