ಅರಂತೋಡು: ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

*ಧಾರ್ಮಿಕ ಶ್ರದ್ಧಾಕೇಂದ್ರಗಳು ಸುಸಂಸ್ಕೃತ ಸಮಾಜಕ್ಕೆ ಬೆಳಕು: ಒಡಿಯೂರು ಶ್ರೀ*

ದೇವಸ್ಥಾನ, ದೈವಸ್ಥಾನ,  ಭಜನಾ ಮಂದಿರದಂತಹ ಶ್ರದ್ಧಾಕೇಂದ್ರಗಳು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅತ್ಯಂತ ಪುರಾತನ ದೈವಸ್ಥಾನಗಳನ್ನು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಡೆಸುವುದರಿಂದ ಸಂಸ್ಕೃತಿಯ ಅನಾವರಣವಾಗಲು ಸಾಧ್ಯ. ಯುವಶಕ್ತಿ ಮತ್ತು ಮಹಿಳೆಯರು ಜಾಗೃತರಾದರೆ ಭವ್ಯ ಭಾರತದ ನಿರ್ಮಾಣವಾಗುತ್ತದೆ. ಇದರಿಂದ ಇಂತಹ ಧಾರ್ಮಿಕ ಶ್ರದ್ಧಾಕೇಂದ್ರಗಳು ಸುಸಂಸ್ಕೃತ ಸಮಾಜಕ್ಕೆ ಬೆಳಕಾಗಲಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.

ಅವರು ಅರಂತೋಡು ಗ್ರಾಮದ ತೋಟಂಪಾಡಿ ಶ್ರೀ ಉಳ್ಳಾಕುಳು, ಉಳ್ಳಾಲ್ತಿ ಮತ್ತು ಸಹ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪ್ರಯುಕ್ತ ಮೇ.14ರಂದು ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ತೋಟಂಪಾಡಿ ಉಳ್ಳಾಕುಳು ದೈವಸ್ಥಾನದ ಹಿನ್ನಲೆಯುಳ್ಳ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿ,  ಆಶೀರ್ವಚನ ನೀಡಿದರು.


ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನರಾಂ ಸುಳ್ಳಿ, ಮೈಸೂರಿನ ಪ್ರಿಯದರ್ಶಿನಿ ಗ್ರೂಫ್ಸ್ ನ ಮಾಲಕ ರೋಶನ್ ಕುರುಂಜಿ, ತಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ವಿಶ್ರಾಂತ ಪ್ರಾಂಶುಪಾಲ ಕೆ.ಆರ್. ಗಂಗಾಧರ, ಅರಂತೋಡು ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಕೊಡಂಕೇರಿ, ಅರಂತೋಡು – ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ವಲಯ ಅರಣ್ಯಾಧಿಕಾರಿ ದಯಾನಂದ ಕುರುಂಜಿ, ದೈವಜ್ಞ ಶಶಿಕುಮಾರ್ ಪಂಡಿತ್, ಉಬರಡ್ಕ ಮಿತ್ತೂರು ನಾಯರ್ ದೈವಸ್ಥಾನದ ಮೊಕ್ತೇಸರ ವೆಂಕಟ್ರಮಣ ಕೆದಂಬಾಡಿ, ಪಂಜ ವಲಯದ  ಉಪ ವಲಯಾರಣ್ಯಾಧಿಕಾರಿ ಮಂಜುನಾಥ್,  ಉಳುವಾರು ತಳಮನೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಉಳುವಾರು, ಜೀರ್ಣೋದ್ಧಾರ ಸಮಿತಿಯ ಖಜಾಂಜಿ ಧನಂಜಯ ಕಲ್ಲುಗದ್ದೆ,  ಕಾರ್ಯದರ್ಶಿ ಯು.ಯಂ‌. ಶೇಷಗಿರಿ,  ಸುಳ್ಯ ಕಟ್ಟಡ ಕಾರ್ಮಿಕ ಸಂಘದ ನಿರ್ದೇಶಕ ಗೋಪಾಲಕೃಷ್ಣ ಕಾಟೂರು, ಅರಂತೋಡು ಗ್ರಾ.ಪಂ. ಉಪಾಧ್ಯಕ್ಷೆ ಕು. ಶ್ವೇತಾ, ಬ್ರಹ್ಮಕಲಶೋತ್ಸವ ಸಮಿತಿಯ ಖಜಾಂಜಿ ಅಯ್ಯಣ್ಣ ಗೌಡ ಉಳುವಾರು, ಗೌರವ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ದೈವಸ್ಥಾನಕ್ಕೆ ವಸ್ತುರೂಪದಲ್ಲಿ  ದಾನಿಗಳಾಗಿ ಸಹಕರಿಸಿದ ಹಲವರನ್ನು, ಒಂದು ಲಕ್ಷಕ್ಕೂ ಅಧಿಕ ಧನಸಹಾಯ ನೀಡಿದ ದಾನಿಗಳನ್ನು  ಸನ್ಮಾನಿಸಿ, ಗೌರವಿಸಲಾಯಿತು.  ಸಾಂಸ್ಕೃತಿಕ ಸಮಿತಿ ಸಂಚಾಲಕ  ಭವಾನಿಶಂಕರ ಅಡ್ತಲೆ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರ.ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ವಂದಿಸಿದರು.   ಅರಂತೋಡು ಗ್ರಾ.ಪಂ‌. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಪ್ರಾಂಶುಪಾಲ ರಮೇಶ್ ಹಾಗೂ ಶ್ರೀಮತಿ ಸವಿತ ಅವರು  ಕಾರ್ಯಕ್ರಮ ನಿರೂಪಿಸಿದರು.
ಮೇ.14ರಂದು ಬೆಳಿಗ್ಗೆ ತ್ರಿಕಾಲ ಪೂಜೆ, ಗಣಪತಿ ಹೋಮ, ಬಿಂಬ ಕಲಶ ಪೂಜೆ, ಬಿಂಬ ಶುದ್ಧಿ, ಸ್ಥಳಶುದ್ಧಿ, ಅನುಜ್ಞಾ ಕಲಶ ಪೂಜೆ, ಕುಂಬೇಶ ಕರ್ಕರಿ ಪೂಜೆ, ಶಯ್ಯ ಪೂಜೆ, ಅನುಜ್ಞಾ ಕಲಶಾಭಿಷೇಕ, ಜೀವೋದ್ವಾಸನೆ, ಜೀವ ಕಲಶ ಶಯ್ಯಾಗಮನ, ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅಧಿವಾಸ ಹೋಮ, ಕಲಶಪೂಜೆ, ಪ್ರಾಸಾದ ಪೀಠ, ಅಧಿವಾಸ, ಧ್ಯಾನಾಧಿವಾಸ, ತ್ರಿಕಾಲಪೂಜೆ, ರಾತ್ರಿ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.