ಬಳ್ಪ ಗ್ರಾಮದ ನೇರ್ಪು ತರವಾಡು ಮನೆ ಮತ್ತು ಶ್ರೀ ಉಳ್ಳಾಕುಲು ಮತ್ತು ಧರ್ಮದೈವ ರುದ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಮೇ. 12-13ರಂದು ನಡೆಯಿತು.
ಮೇ. 12ರಂದು ಸಂಜೆ ತಂತ್ರಿಗಳ ಅಗಮನದ ಬಳಿಕ ದೇವತಾ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಗಳು ನಡೆಯಿತು. ಮೇ. 13ರಂದು ಪೂರ್ವಾಹ್ನ ಗೃಹ ಪ್ರವೇಶ, ಬಳಿಕ ಶ್ರೀ ಉಳ್ಳಾಕುಲು, ದರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಹರಿ ಸೇವೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನೆರವೇರಿತು.