ಸುಳ್ಯದ ಶ್ರೀ ಕಾನತ್ತಿಲ ಉಳ್ಳಾಕುಳ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಮೇ. 14ರಿಂದ 15ರಂದು ಜರಗಿತು.
ಮೇ. 14ರಂದು ಸಂಜೆ ಕುರುಂಜಿ ಮಾಳಿಗೆಯಿಂದ ಭಂಡಾರ ತಂದು ರಾತ್ರಿ ಸಂಕ್ರಮಣ ಪೂಜೆ ನಡೆಯಿತು. ಮೇ. 15ರಂದು ಮುಂಜಾನೆ ಉಳ್ಳಾಕುಳ ನೇಮ, ನಂತರ ಪುರುಷರಾಯ ಮತ್ತು ಇತರ ದೈವಗಳ ನೇಮ, ಹರಿಕೆ, ಕಾಣಿಕೆ ಸ್ವೀಕಾರ ನಡೆದು ಅ. 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ. ಮೇ. 22ರಂದು ಗುಳಿಗ ಸಮ್ಮಾನ ನಡೆಯಲಿದೆ.