2022- 23 ನೇ ಸಾಲಿಗೆ ಒಂದರಿಂದ ಐದನೇ ತರಗತಿಯವರೆಗೆ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಪರಿಶಿಷ್ಟ ವರ್ಗಗಳ ಇಲಾಖೆಯ ವತಿಯಿಂದ ನಡೆಸಲ್ಪಡುವ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಾಲ್ಮೀಕಿ ಆಶ್ರಮ ಶಾಲೆ ಸುಬ್ರಹ್ಮಣ್ಯ 9148809552, ವಾಲ್ಮೀಕಿ ಆಶ್ರಮ ಶಾಲೆ ಆಲೆಟ್ಟಿ 9008384924, ವಾಲ್ಮೀಕಿ ಆಶ್ರಮ ಶಾಲೆ ಬಾಳಿಲ 9008384934 ಈ ಸಂಸ್ಥೆಗಳಲ್ಲಿ ಪರಿಶಿಷ್ಟ ಪಂಗಡದವರಿಗೆ ಪ್ರಥಮ ಆದ್ಯತೆ ಇದ್ದು, ಪ. ಜಾತಿ ಮತ್ತು ಇತರೆ ಹಿಂದುಳಿದ ವರ್ಗದವರಿಗೂ ಅವಕಾಶವಿದೆ ಉಚಿತ ಶಿಕ್ಷಣ ಮತ್ತು ಊಟೋಪಚಾರದ ವ್ಯವಸ್ಥೆ ಇದೆ. ಪ್ರತಿವರ್ಷ 2 ಜೊತೆ ಸಮವಸ್ತ್ರ ಉಚಿತ ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿ ಗ್ರಂಥಾಲಯ ವ್ಯವಸ್ಥೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಇದೆ. ಅರ್ಜಿಯನ್ನು ಸುಳ್ಯ ಸಮಾಜ ಕಲ್ಯಾಣ ಇಲಾಖೆ ಕಚೇರಿ ಹಾಗೂ ಆಶ್ರಮ ಶಾಲೆಗಳಿಂದ ಪಡೆದು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 08257 – 233527 ,ನ್ನು ಸಂಪರ್ಕಿಸಬಹುದೆಂದು ಇಲಾಖಾ ಪ್ರಕಟಣೆ ತಿಳಿಸಿದೆ.