ಕೋಡ್ಲ ಗಣಪತಿ ಭಟ್ ಅವರ ಸಂಚಾಲಕತ್ವದ ಶ್ರೀ ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿಯ ಈ ವರ್ಷದ ಯಕ್ಷಗಾನ ನಾಟ್ಯ ತರಗತಿ ಇಂದು ಸುಳ್ಯ ಚೆನ್ನಕೇಶವ ದೇಗುಲದ ಸಭಾಭವದಲ್ಲಿ ಉದ್ಘಾಟನೆಗೊಂಡಿತು.
ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆ ತರಗತಿಗಳನ್ನು ಉದ್ಘಾಟಿಸಿ ಶುಭಹಾರೈಸಿದರು. ” ನಾಲ್ಕು ದಶಕದ ಇತಿಹಾಸವಿರುವ ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿ ಸುಳ್ಯದ ಪಾಲಿಗೆ ಯಕ್ಷಗಾನ ವಿಶ್ವ ವಿದ್ಯಾಲಯವಿದ್ದಂತೆ. ಇದರ ಮೂಲಕ ಸಾವಿರಾರು ವಿದ್ಯಾರ್ಥಿಗಳು ರಂಗವೇರಿದ್ದಾರೆ. ನೂರಾರು ಮಂದಿ ವೃತ್ತಿಪರ ಮೇಳ ಸೇರಿ ಬದುಕು ಕಂಡುಕೊಂಡಿದ್ದಾರೆ.” ಎಂದರಲ್ಲದೆ, ” ಯಕ್ಷಗಾನ ಸರ್ವಾಂಗೀಣ ಕಲೆ. ಯಕ್ಷಗಾನ ಮತ್ತೆ ತನ್ನ ಪರಮ ವೈಭವ ಸ್ಥಿತಿ ಕಾಣುತ್ತಿರುವುದು ಶ್ಲಾಘನೀಯ ಎಂದರು.
ನಾಟ್ಯತರಗತಿಯ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಚಾಲಕ ಕೋಡ್ಲ ಗಣಪತಿ ಭಟ್ ಸ್ವಾಗತಿಸಿ, ವಂದಿಸಿದರು.