ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ವಸ್ತ್ರಮಳಿಗೆ ಶೀತಲ್ ಕಲೆಕ್ಷನ್ 18 ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಬಟ್ಟೆಬರೆಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ಹಾಗೂ ಚಿನ್ನದ ನಾಣ್ಯಗಳು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಬಹುಮಾನ ನೀಡುವ ಯೋಜನೆಯ ಎರಡನೇ ಆವೃತ್ತಿಯ ಡ್ರಾ ಫಲಿತಾಂಶ ಮೆ.14 ರಂದು ನಡೆಯಿತು.
ಸುಳ್ಯ ವರ್ತಕರ ಸಂಘದ ಪಿ.ಬಿ ಸುಧಾಕರ ರೈ ಚೀಟಿ ಎತ್ತುವ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆಮಾಡಿದರು.
ಈ ಸಂದರ್ಭದಲ್ಲಿ ಶೀತಲ್ ಕಲೆಕ್ಷನ್ ಮಾಲಕ ಹಾಜಿ ಅಬ್ದುಲ್ ರಜಾಕ್,ಹಮೀದ್ ಸಮ್ಮರ್ ಕೂಲ್,ಸುಳ್ಯ ಜೇಸಿ ಅಧ್ಯಕ್ಷ ಬಶೀರ್ ಯು.ಪಿ,ಇಸ್ಮಾಯಿಲ್ ಶಾಫಿ, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಮಾಲಕರು ಈ ಅದೃಷ್ಟ ಯೋಜನೆ ಮೂರನೇ ಆವೃತ್ತಿ ಮುಂದುವರಿಯಲಿದೆ ಅದರೊಂದಿಗೆ ಮದುವೆ ಇನ್ನಿತರ ಸಮಾರಂಭಗಳ ಖರೀದಿಯಲ್ಲಿ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.