ಕಲಾಗ್ರಾಮ ಕಲ್ಮಡ್ಕ, ಯುವಕ ಮಂಡಲ ಕಳಂಜ, ಸಾರ್ವಜನಿಕ ದೇವತಾರಾಧನೆ ಸಮಿತಿ ಕೊರತ್ತಿಕಲ್ಲು ಇದರ ಸಂಯುಕ್ತ ಆಶ್ರಯದಲ್ಲಿ ಭಜನಾ ಸಮರ್ಥ 2022 ಇಂದು ಉದ್ಘಾಟನೆಗೊಂಡಿತು. ಶ್ರೀರಾಮ ಭಜನಾ ಮಂದಿರ ಕಲ್ಮಡ್ಕ ಇದರ ಸ್ಥಾಪಕಾಧ್ಯಕ್ಷ ಕೆ ಎನ್ ಪರಮೇಶ್ವರಯ್ಯ ದೀಪೋಜ್ವಲನೆ ಮಾಡಿ ಉದ್ಘಾಟಿಸಿದರು. ಈ ಸಂದರ್ಭ ಕಲಾಗ್ರಾಮ ಕಲ್ಮಡ್ಕ ಇದರ ಅಧ್ಯಕ್ಷರಾದ ಸಾಯಿನಾರಾಯಣ ಕಲ್ಮಡ್ಕ, ಸಾರ್ವಜನಿಕ ದೇವತಾರಾಧನಾ ಸಮಿತಿ ಕೊರತ್ತಿಕಲ್ಲು ಇದರ ಅಧ್ಯಕ್ಷ ರವೀಂದ್ರಗೌಡ ಮಾಳಿಗೆ, ಯುವಕ ಮಂಡಲ ಕಳಂಜದ ನಾರಾಯಣ ಕೋಡಿಯಡ್ಕ, ವೈದೇಹಿ ಯುವತಿ ಮಂಡಲ ಕಲ್ಮಡ್ಕ ಇದರ ಅಧ್ಯಕ್ಷೆ ಶ್ರೀಮತಿ ರೂಪಾ ಸಾಯಿ ನಾರಾಯಣ, ಯುವ ಸ್ಫೂರ್ತಿ ಸೇವಾ ಸಂಘ ಕಲ್ಮಡ್ಕ ಇದರ ಅಧ್ಯಕ್ಷ ಶಿವರಾಮ ಕೊಳೆಂಜಿಕೋಡಿ, ಶ್ರೀರಾಮ ಮಂದಿರ ಟ್ರಸ್ಟ್ ನ ಸದಸ್ಯ ಜಿ ಗೋವಿಂದಯ್ಯ, ಉಪಸ್ಥಿತರಿದ್ದರು. ಶ್ರೀನಿವಾಸ ಜೋಗಿಯಡ್ಕ ಮತ್ತು ಸಚಿತ್ ಪೆರಿಯಪ್ಪು ಕಾರ್ಯಕ್ರಮ ನಿರೂಪಿಸಿದರು.