ಪಿ ಯುಸಿ ವಿದ್ಯಾರ್ಥಿನಿ ಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯನ್ನು ಪುಸಲಾಯಿಸಿ ಸುಳ್ಯದ ಲಾಡ್ಜ್ ವೊಂದಕ್ಕೆ ಕರೆದುಕೊಂಡು ಬಂದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯುವಕನನ್ನು ಬಂದಿಸಿದ್ದಾರೆ.
ಮಂಡೆಕೋಲಿನ ಅಂಬ್ರೋಟಿ ಕಕ್ಕಾಜೆ ಬೋಜಪ್ಪ ಎಂಬವರ ಪುತ್ರ ಅಶ್ವಿನ್ ಬಂಧಿತ ಯುವಕ. ಅಶ್ವಿನ್ ಮುರುಳ್ಯ ಗ್ರಾಮದ ಪಿ.ಯು.ಸಿ.ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದನೆಂದೂ, ಬಳಿಕ ಆಕೆಯ ಜತೆ ಫೋನ್ ನಲ್ಲಿ ಸಂಪರ್ಕದಲ್ಲಿದ್ದನೆಂದೂ ಹೇಳಲಾಗಿದೆ. ಆಕೆಯನ್ನು ಎಪ್ರಿಲ್ ತಿಂಗಳಿನಲ್ಲಿ ಸುಳ್ಯಕ್ಕೆ ಬರಲು ಹೇಳಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನೆಂದೂ ಆರೋಪಿಸಲಾಗಿದ್ದು ಮೇ.9 ರಂದು ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಅಶ್ವಿನ್ ರನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತೆಂದು ತಿಳಿದುಬಂದಿದೆ.