ಬೆಳ್ಳಾರೆ ಗ್ರಾಮದ ಗೌರಿಹೊಳೆ ಸಮೀಪವಿರುವ ಗೌರಿಪುರಂನಲ್ಲಿ ನೂತನವಾಗಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ನಿರ್ಮಾಣವಾಗಲಿದ್ದು, ಸಾನಿಧ್ಯದ ಸಮೀಪ ಮೇ. 26, 27ರಂದು ನಡೆಯಲಿರುವ ಚಿತ್ರಕೂಟ ಸಹಿತ ನಾಗದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಊರವರಿಂದ ಶ್ರಮದಾನ ಕಾರ್ಯಕ್ರಮ ಮೇ. 15ರಂದು ಗೌರಿಪುರಂನಲ್ಲಿ ನಡೆಯಿತು.
ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಎಸ್. ಬಂಡಿಮಜಲು, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಿರಿಯ ಸಲಹೆಗಾರರು ಸೇರಿದಂತೆ ಊರಿನ ಭಕ್ತಾದಿಗಳು ಶ್ರಮದಾನದಲ್ಲಿ ಭಾಗವಹಿಸಿದರು.