ವಳಲಂಬೆಯಲ್ಲಿ ಪಾವಂಜೆ ಮೇಳದವರಿಂದ ಯಕ್ಷಗಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕುಮಾರ ಸುಬ್ರಹ್ಮಣ್ಯ, ಪಟ್ಲ ಸತೀಶ್ ಶೆಟ್ಟಿಯವರಿಗೆ ಸನ್ಮಾನ

ಪುಚ್ಚಪ್ಪಾಡಿ ವಿಶ್ವನಾಥ ಮತ್ತು‌ ಮನೆಯವರಿಂದ ಪಾವಂಜೆ ನಾಗ ವೃಜ ಕ್ಷೇತ್ರದ ಶ್ರೀ ಜ್ಞಾನ ಶಕ್ತಿ‌ ಸುಬ್ರಹ್ಮಣ್ಯ ಸ್ವಾಮಿ‌ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಸೇವೆ ಆಟವು ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇಗುಲದ ವಠಾರದಲ್ಲಿ ನಡೆಯಿತು.

ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನದ ನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ‌ ಖ್ಯಾತ ಹಿಮ್ಮೇಳ ವಾದಕ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಮತ್ತು ಮೇಳದ ಸಂಚಾಲಕ ಹಾಗೂ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಸಂಘಟಕ ಡಾ. ವಿಷ್ಣು ಪ್ರಸಾದ್ , ವಳಲಂಬೆ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಅವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಪುಚ್ಚಪ್ಪಾಡಿ ಮನೆಯವರ ಪರವಾಗಿ ವೆಂಕಟೇಶ್ ಪುಚ್ಚಪ್ಪಾಡಿಯವರು ಪಟ್ಲ ಫೌಂಡೇಶನ್ ಗೆ ಹತ್ತು ಸಾವಿರ ರೂ. ಸಹಾಯಧನ ನೀಡಿದರು.

ಸಂಘಟಕರಾದ ವಿಶ್ವನಾಥ ಪುಚ್ಚಪ್ಪಾಡಿ, ಹರಿ ಸುಬ್ರಹ್ಮಣ್ಯ ಪುಚ್ಚಪ್ಪಾಡಿ ಉಪಸ್ಥಿತರಿದ್ದರು.‌ ಅಪರ್ಣಾ ಪುಚ್ಚಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಪುಚ್ಚಪ್ಪಾಡಿ ವಂದಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.