ಗುತ್ತಿಗಾರು:ಶಾಲಾ ಪ್ರಾರಂಭೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಳೆಬಿಲ್ಲು ಕಾರ್ಯಕ್ರಮಕ್ಕೆ ಚಾಲನೆ

ತಳಿರು ತೋರಣಗಳಿಂದ ಶೃಂಗರಿಸಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡ ಶಿಕ್ಷಕಿಯರು

ಗುತ್ತಿಗಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಹಳ ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವವನ್ನು ಇಂದು ಆಚರಿಸಲಾಯಿತು.ಮಕ್ಕಳು ,ಫೋಷಕರು ,ಶಾಲಾ ಶಿಕ್ಷಕರೆಲ್ಲರೂ ಸೇರಿ ಶಾಲಾ ಅವರಣದಿಂದ ,ಕೆಳಗೆ ಪೇಟೆ-ಮುತ್ತಪ್ಪನಗರದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ಶಾಲೆಯಲ್ಲಿ
ಭಾರತಾಂಬೆಯ ಫೋಟೋಕ್ಕೆ ಪುಷ್ಪ ನಮನ ಸಲ್ಲಿಸಿದರು.ನಂತರ ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ ಮಕ್ಕಳನ್ನು ಬರಮಾಡಿಕೊಂಡರು.ತದನಂತರ ಶಿಕ್ಷಕ ಶಶಿಧರ ಮಾವಿನಕಟ್ಟೆ ಮಕ್ಕಳಿಗೆ ಹಾಡು ಹೇಳಿ ಮಕ್ಕಳು ಡ್ಯಾನ್ಸ್ ಮಾಡುದರ ಮೂಲಕ ಮಳೆಬಿಲ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ.ಕಲಿಕಾ ಚೇತರಿಕೆ ವರ್ಷ ಎಂದು ಘೋಷಣೆ ಕೂಗಲಾಯಿತು.ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಬೆಳ್ಯಪ್ಪ ಗೌಡ ಕಡ್ತಲಕಜೆ ದೀಪ ಬೆಳಗಿಸಿ ಉದ್ಘಾಟಿಸಿದರು.ವೇದಿಕೆಯಲ್ಲಿ ಎಸ್ ಡಿಎಂ ಸಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ,ಗ್ರಾ.ಪಂ ಅಧ್ಯಕ್ಷೇ ರೇವತಿ ಆಚಳ್ಳಿ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ ,ಶಾಲಾ ಸಂಪನ್ಮೂಲ ವ್ಯಕ್ತಿ ಸಂತೋಷ್ ,ಎಸ್ ಡಿ ಎಂಸಿ ಉಪಾಧ್ಯಕ್ಷೇ ಕುಲಾಶ್ರೀ ಬಾಕಿಲ ,ಗ್ರಾ.ಪಂ ಸದಸ್ಯರಾದ ಜಗದೀಶ ಬಾಕಿಲ,ಮಂಜುಳಾ ಮುತ್ಲಾಜೆ ,ಸುಮಿತ್ರ ಮೂಕಮಲೆ ,ಭಾರತಿ ಸಾಲ್ತಾಡಿ ,ಮುಖ್ಯೋಪಾಧ್ಯಯಿನಿ ಉಮಾವತಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ದಾನಿಗಳಾದ ರೋಹಿತಾಕ್ಷ ದೇವಸ್ಯ ,ಶಿವರಾಮ ಕರುವಜೆ,ಎಸ್ ಡಿಎಂಸಿ ಸದಸ್ಯರು,ಪೋಷಕರು,ಶಾಲಾ ಶಿಕ್ಷಕ-ಶಿಕ್ಷಕಿಯರು,ಹಳೆ ವಿದ್ಯಾರ್ಥಿಗಳು ,ಅಡುಗೆ ಸಿಬ್ಬಂದಿಗಳು ,ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕ ಶಶಿಧರ ಮಾವಿನಕಟ್ಟೆ ಸ್ವಾಗತಿಸಿ ,ಮುಖ್ಯೋಪಾದ್ಯಯಿನಿ ಉಮಾವತಿ ವಂದಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.