ಸುಳ್ಯ ಸರ್ಕಾರಿ ಜೂನಿಯರ್ ಕಾಲೇಜ್ ಇದರ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಪ್ರಾರಂಭೋತ್ಸವ ಇಂದು ನಡೆಯಿತು.
ಸುಳ್ಯ ತಾಲೂಕು ಕಚೇರಿ ಆವರಣದಿಂದ ಶಾಲಾ ಪ್ರಾರಂಭೋತ್ಸವದ ಮೆರವಣಿಗೆ ಆರಂಭಗೊಂಡು ಶಾಲಾ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ದೊಂದಿಗೆ ಮುಕ್ತಾಯಗೊಂಡಿತು.
ಪ್ರಾರಂಭೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಸಮಿತಿ ಕಾರ್ಯಾಧ್ಯಕ್ಷ ಶಂಕರ್ ಪೆರಾಜೆ ವಹಿಸಿದ್ದರು.
ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ನಗರ ಪಂಚಾಯತ್ ಸದಸ್ಯರುಗಳಾದ ಡೇವಿಡ್ ದಿರಾ ಕ್ರಾಸ್ತ, ಕಿಶೋರಿ ಶೇಟ್, ಶೀಲಾ ಕುರುಂಜಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶೀತಲ್, ಸಂಪನ್ಮೂಲ ವ್ಯಕ್ತಿ ಸುಂದರ ಕೇನಾಜೆ, ಶಾಲಾ ಎಸ್ಡಿಎಂಸಿ ಸದಸ್ಯರು, ಅಧ್ಯಾಪಕರು, ಸಿ ಆರ್ ಪಿ ಗಳು ಉಪಸ್ಥಿತರಿದ್ದರು.
ಶೈಕ್ಷಣಿಕ ವರ್ಷದ ಆರಂಭದ ಪೂರ್ಣ ದಾಖಲಾತಿ ಫಲಕವನ್ನು ಇ ಓ ಭವಾನಿ ಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್ ಪಿ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು,ಪೋಷಕ ವೃಂದದವರು ಉಪಸ್ಥಿತರಿದ್ದರು.