ಕಲಾಗ್ರಾಮ ಕಲ್ಮಡ್ಕ ಯುವಕ ಮಂಡಲ ಕಳಂಜ (ರಿ.) ಹಾಗೂ ಸಾರ್ವಜನಿಕ ದೇವತಾರಾಧನಾ ಸಮಿತಿ ಕೊರತ್ತಿಕಲ್ಲು, ಕಲ್ಮಡ್ಕ ಇವರ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ‘ಭಜನಾ ಸಮರ್ಥ 2022’ ನಡೆಯಿತು.
ಮೇ 16, 2022 ರ0ದು ಕಲ್ಮಡ್ಕ ಶ್ರೀರಾಮ ಭಜನಾ ಮಂದಿರ, ರಾಮನಗರ ಇಲ್ಲಿ ನಡೆದ ಭಜನಾ ಸ್ಪರ್ಧೆಯಲ್ಲಿ ಸುಳ್ಯದ ರಂಗಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳು ‘ಸಮರ್ಥ ಭಜಕರು’ ಪ್ರಶಸ್ತಿಗೆ ಭಾಜನರಾದರು.
ತಂಡದಲ್ಲಿ ಸನಿಹಾ ಶೆಟ್ಟಿ, ವೈಷ್ಣವಿ ಶೆಟ್ಟಿ, ಇಂಚರಾ ಪಿ.ಎಸ್, ಸಂಜನಾ ಕೆ., ಸನ್ನಿಧಿ, ಮೌಲ್ಯ ಮಜಿಕೋಡಿ, ಶ್ರೀಮಾ, ಅಕ್ಷಿತ ಹಾಗೂ ಹಿಮ್ಮೇಳದಲ್ಲಿ ಬಾಲಕೃಷ್ಣ ಮೇನಾಲ ಮತ್ತು ದಿವ್ಯ ಧನುಷ್ ಭಾಗವಹಿಸಿದರು.