ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧೀನಗರ ಸುಳ್ಯ ಇಲ್ಲಿ ಪ್ರೌಢ ಶಾಲೆ ಮತ್ತು ಪ್ರಾಥಮಿಕ ವಿಭಾಗದಲ್ಲಿ ಶಾಲಾ ಪ್ರಾರಂಭೋತ್ಸವ ಇಂದು (ಮೇ.16 ) ನಡೆಯಿತು.
ಮೊದಲು ಪ್ರಾಥಮಿಕ ವಿಭಾಗ ದಲ್ಲಿ ಪ್ರಾರಂಭೋತ್ಸವವನ್ನು ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಶಾಲೆಗೆ ಹೋಗಿ ವೇದಿಕೆ ಬಳಿ ಬಂದು ಕಾರ್ಯಕ್ರಮ ನಡೆಸಲಾಯಿತು.
ಪ್ರಾಥಮಿಕ ವಿಭಾಗದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಾಥಮಿಕ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ಆರ್.ಕೆ ಮಹಮ್ಮದ್ ವಹಿಸಿದ್ದರು. ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾರ್ಯಧ್ಯಕ್ಷ ಪ್ರವೀಣ್ ನಾಯಕ್ , ಪ್ರಭಾರ ಪ್ರಾಂಶುಪಾಲ ರಾಜೇಶ್, ಉಪ ಪ್ರಾಶುಪಾಲ ಆರುಣ್ ಕುಮಾರ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎ.ಜಿ ಭವಾನಿ, ಹಳೆ ವಿದ್ಯಾರ್ಥಿ ಸಂಘ ದ ಅಧ್ಯಕ್ಷ ಜೆ.ಕೆ ರೈ ಮತ್ತು ಆರೋಗ್ಯ ಇಲಾಖೆಯ ಸಿಸ್ಟರ್ ನವರು ಹಾಜರಿದ್ದರು
ಮುಖ್ಯ ಶಿಕ್ಷಕಿ ಭವಾನಿ ಅವರು ಸ್ವಾಗತಿಸಿದರು.
ಪ್ರಾದ್ಯಾಪಕಿಯರಾದ ಜಯಶ್ರೀ ಮತ್ತು ರಾಜೇಶ್ವರಿ ಕಲಿಕಾ ಚೇತರಿಕೆ ಬಗ್ಗೆ ಮಾಹಿತಿ ನೀಡಿದರು. ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.
ಪ್ರೌಢ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಮೆರವಣಿಗೆ ಮೂಲಕ ಶಾಲೆಗೆ ವೇದಿಕೆ ತೆರಳಿ ಕಲಿಕಾ ಪ್ರಾರಂಭೋತ್ಸವ ಆಚರಿಸಿದರು. ಪ್ರೌಢಶಾಲಾ ವಿಭಾಗದ ಕಾರ್ಯಕ್ರಮ ದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾರ್ಯಧ್ಯಕ್ಷ ಪ್ರವೀಣ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ
ಗಳಾಗಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಪ್ರಭಾರ ಪ್ರಾಶುಪಾಲ ರಾಜೇಶ್, ಉಪ ಪ್ರಾಂಶುಪಾಲ ಅರುಣ್ ಕುಮಾರ್, ಪ್ರಾಧ್ಯಾಪಕ ಚಿನ್ನಪ್ಪ, ಎಸ್ ಡಿ ಎಂ ಸಿ ಯ ಸಿದ್ದಿಕ್ ವೇದಿಕೆಯಲ್ಲಿದ್ದರು. ಶಹನಾಜ್ ಅವರು ಕಲಿಕೆ ಬಗ್ಗೆ ಮಾಹಿತಿ ನೀಡಿದರು. ಉಪ ಪ್ರಾಂಶುಪಾಲ ಅರುಣ್ ಕುಮಾರ್ ಸ್ವಾಗತಿಸಿ, ಪ್ರಾದ್ಯಾಪಕಿ ಜ್ಯೋತಿ ಲಕ್ಷೀ ಅವರು ಧನ್ಯವಾದವಿತ್ತರು. ಎಲ್ಲಾ ಪೋಷಕರು ಸಭೆಯಲ್ಲಿ ಹಾಜರಿದ್ದರು.