ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ , ಕುಲಾಲ ಸಂಘದ ಮಾಜಿ ಅಧ್ಯಕ್ಷ ತಡಗಜೆಯ ಪುರಂದರ ಕುಲಾಲ್ ರವರು ಮೇ. 04 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಮೇ.16 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಕುಲಾಲ ಸಂಘದ ಮಾಜಿ ಅಧ್ಯಕ್ಷ ಕೇಶವ ಕುಲಾಲ್ ದಿ.ಪುರಂದರ ಕುಲಾಲ್ ರವರ ಆದರ್ಶ ಗುಣಗಳ ಬಗ್ಗೆ ಮತ್ತು ವೃತ್ತಿ ಜೀವನದ ಬಗ್ಗೆ ನೆನಪಿಸಿ ಗುಣಗಾನಗೈದರು.
ಈ ಸಂದರ್ಭದಲ್ಲಿ ಮೃತರ ತಾಯಿ ಶ್ರೀಮತಿ ರಾಧಾ, ಪತ್ನಿ ನಳಿನಿ, ಪುತ್ರ ಅನಿಶ್, ಪುತ್ರಿ ಅನ್ವಿತಾ ಹಾಗೂ ಸಹೋದರರು ,ಕುಟುಂಬಸ್ಥರು ಉಪಸ್ಥಿತರಿದ್ದರು.
ಆಗಮಿಸಿದ ನೂರಾರು ಜನರು ದಿ.ಪುರಂದರ ಕುಲಾಲ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.