ಸುಳ್ಯದಲ್ಲಿ ಲೋಗೋ ಅನಾವರಣ : ಪತ್ರಕರ್ತರಿಗೆ ಕೊಡೆ ವಿತರಣೆ
ಎಲಿಮಲೆಯ ಇಸ್ಲಾಂ ಅಸೋಸಿಯೇಶನ್ ಸಂಸ್ಥೆಯು ೪೦ ವರ್ಷಗಳನ್ನು ಪೂರೈಸಿದ್ದು ೪೦ರ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಸಮಿತಿಯು ಕಾರ್ಯಯೋಜನೆ ಹಮ್ಮಿಕೊಂಡಿದ್ದು ಆ ಪ್ರಯುಕ್ತ ೪೦ರ ಸಂಭ್ರಮದ ಲೋಗೋ ಅನಾವರಣ ಹಾಗೂ ಪತ್ರಕರ್ತರಿಗೆ ಕೊಡೆ ವಿತರಣೆ ನಡೆಯಿತು.
ಮೇ.೧೬ರಂದು ಬೆಳಗ್ಗೆ ಸುಳ್ಯ ಪ್ರೆಸ್ ಕ್ಲಬ್ನಲ್ಲಿ ೪೦ರ ಸಂಭ್ರಮದ ಕುರಿತು ಪತ್ರಕರ್ತರೊಂದಿಗೆ ವಿಷಯ ಹಂಚಿಕೊಂಡ ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಲತೀಫ್ ಹರ್ಲಡ್ಕ, ಸುಳ್ಯ ಗಾಂಧಿನಗರ ಮಸೀದಿ ಅಧ್ಯಕ್ಷ ಕೆ.ಎಂ. ಮುಸ್ತಫ, ಎಲಿಮಲೆ ಮಸೀದಿ ಅಧ್ಯಕ್ಷ ಇಕ್ಬಾಲ್ ಎಲಿಮಲೆಯವರು ಪ್ರೆಸ್ ಕ್ಲಬ್ನಲ್ಲಿ ಲೋಗೋ ಅನಾವರಣ ಗೊಳಿಸಿದರು.
ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕೋಶಾಧಿಕಾರಿ ಯಶ್ವಿತ್ ಕಾಳಮ್ಮನೆ, ಪತ್ರಕರ್ತರರಾದ ಗಂಗಾಧರ ಮಟ್ಟಿ, ದುರ್ಗಾಕುಮಾರ್ ನಾಯರ್ಕೆರೆ ವೇದಿಕೆಯಲ್ಲಿದ್ದರು. ಬಳಿಕ ೪೦ ವರ್ಷದ ಸಂಭ್ರಮಕ್ಕೆ ೪೦ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದು ಅದರ ಅಂಗವಾಗಿ ಪತ್ರಕರ್ತರಿಗೆ ಕೊಡೆ ವಿತರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಸೂಫಿ ಎಲಿಮಲೆ, ಜತೆ ಕಾರ್ಯದರ್ಶಿ ಸಿದ್ದಿಕ್ ಎಲಿಮಲೆ, ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.