Breaking News

ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯಮಠದಲ್ಲಿ ಶ್ರೀ ನರಸಿಂಹ ಜಯಂತಿ ಮಹೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯಮಠದಲ್ಲಿ
ಮೇ.13 ರಿಂದ ಶ್ರೀ ನರಸಿಂಹ ಜಯಂತಿ ಮಹೋತ್ಸವ ನಡೆಯುತಿದೆ.
ಮೇ.13 ರ ಪ್ರಾತಃಕಾಲ ವಸಂತ ದ್ವಾದಶಿ, ಶ್ರೀ ವೇದವ್ಯಾಸ ಜಯಂತೀ ವಸಂತ ಪೂಜೆ. ನಡೆದಿದೆ. ಮರುದಿನ ಗಣಹೋಮ ಮತ್ತು ಶ್ರೀ ನರಸಿಂಹ ಹೋಮ ನಡೆದಿದ್ದು ಮೇ.15 ರಂದು ಶ್ರೀ ನರಸಿಂಹ ಜಯಂತಿ ಕಾರ್ಯಕ್ರಮ ನಡೆದಿವೆ. ಪ್ರಾತಃಕಾಲ ಶ್ರೀ ನರಸಿಂಹ ದೇವರ ಮಹಾಭಿಷೇಕ, ನಡೆದು ರಾತ್ರಿ ಹೊರಾಂಗಣ ಮತ್ತು ರಾಜಬೀದಿಯಲ್ಲಿ ವಿಮಾನೋತ್ಸವ, ವಸಂತಪೂಜೆ, ಡೋಲೋತ್ಸವ ವಿಜ್ರಂಭಣೆಯಿಂದ ನಡೆಯಿತು.

ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮ:

ಮೇ.13 ರ ಸಾಯಂಕಾಲ – ಯೋಗೀಶ್ ಕಿಣಿ ಮತ್ತು ಬಳಗ, ಕಾರ್ಕಳ ಇವರಿಂದ ಭಜನಾಮೃತ ನಡೆದಿದೆ. ಮೇ.14 ರ ಸಂಜೆ 5 ಕ್ಕೆ ಅಂಕುಶ್ ಎನ್. ನಾಯಕ್ ರಿಂದ ಸಿತಾರ್ ವಾದನ ನಡೆಯಿತು. ಸಂಜೆ ಪಂಡಿತ್ ಜಯತೀರ್ಥ ಮೇವುಂಡಿ ಅವರಿಂದ ಹಿಂದೂಸ್ಥಾನಿ ಗಾಯನ “ದಾಸವಾಣಿ” ನಡೆಯಿತು. ಮೇ.15 ರ ಬೆಳಿಗ್ಗೆ ಯಜ್ಞೇಶ ಆಚಾರ್ಯ ಅವರಿಂದ ಭಕ್ತಿ ಸಂಗೀತ-ನಡೆದು, ಬಳಿಕ ಬೆ.11 ರಿಂದ ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರಿಂದ ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ರಿಂದ ಆಶೀರ್ವಚನ ನಡೆಯಿತು.
ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರು ಇದರ ವಿದ್ವಾನ್ ಗುರುಪವನ್ ಆಚಾರ್ಯ ಉಪನ್ಯಾಸ ನಡೆಯಿತು.
ಸಂಜೆ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಅವರ ಶಿಷ್ಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಹಾಗೂ ದೇವರ ನಾಮಗಳ ಗಾಯನ
ನಡೆಯಿತು. ಮೇ.16 ಪೂರ್ವಾಹ್ನ ವ್ಯಾಸ ಪೂರ್ಣಿಮಾ,ವ್ಯಾಸ ಪೂಜೆ, ಮಹಾರಥೋತ್ಸವ ನಡೆಯಿತು. ಸಂಜೆ ವಿದ್ವಾನ್ ಸಂದೀಪ್ ನಾರಾಯಣ ಚೆನ್ನೈ ಇವರಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ ಕಛೇರಿ ನಡೆಯಿತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.