ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ವಿವಿಧ ಕಾರ್ಯಕ್ರಮಗಳೊಂದಿಗೆ ಇಂದು ನಡೆಯಿತು.
ಶಾಲೆಯ ಸುತ್ತಲೂ ತೋರಣಗಳಿಂದ ಅಲಂಕರಿಸಲಾಗಿತ್ತು. ಹೊಸದಾಗಿ ಶಾಲೆಗೆ ಸೇರ್ಪಡೆಯಾದ ಮಕ್ಕಳಿಗೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು. ಹಾಗೂ ಈ ಸಂದರ್ಭದಲ್ಲಿ ಸುಂದರ ಭಾರತ ಟ್ರಸ್ಟ್ ಜೆ ಪಿ ನಗರ ಬೆಂಗಳೂರು ಇವರ ವತಿಯಿಂದ ಉಚಿತ ಲೇಖನ ಪುಸ್ತಕ ವಿತರಣೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್’ಡಿಎಂಸಿ ಅಧ್ಯಕ್ಷ ನಝೀರ್ ಶಾಂತಿನಗರ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತುಳಸಿ ಸ್ವಾಗತಿಸಿ, ಶುಭಕೋರಿದರು. ಪಠ್ಯದ ಬಗ್ಗೆ ಪವಿತ್ರ ರವರು ಮಾಹಿತಿ ನೀಡಿದರು. ಶಾಲಾ ದೈಹಿಕ ಶಿಕ್ಷಕ ರಘುನಾಥ್ ವಂದಿಸಿದರು. ಈ ಸಂಧರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪೋಷಕರು, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.