ಆರಾಧನಾ ಭಜನಾ ಮಂಡಳಿ ಬಂಟ್ವಾಳ ಭಜನಾ ಸಮರ್ಥ, ಮಹಿಳಾ ಪರಿಷತ್ತು ಸುಳ್ಯ ಭಜನಾ ಸಮರ್ಥನೀಯ
ಕಲಾಗ್ರಾಮ ಕಲ್ಮಡ್ಕ, ಯುವಕ ಮಂಡಲ ಕಳಂಜ, ಸಾರ್ವಜನಿಕ ದೇವತಾರಾಧನೆ ಸಮಿತಿ ಕೊರತ್ತಿಕಲ್ಲು ಇದರ ಸಂಯುಕ್ತ ಆಶ್ರಯದಲ್ಲಿ ಭಜನಾ ಸಮರ್ಥ 2022 ಮೇ.15 ರಂದು ನಡೆದಿದ್ದು ಆರಾಧನಾ ಭಜನಾ ಮಂಡಳಿ ಬಂಟ್ವಾಳ ಭಜನಾ ಸಮರ್ಥ 2022, ಮಹಿಳಾ ಪರಿಷತ್ತು ಸುಳ್ಯ ಭಜನಾ ಸಮರ್ಥನೀಯ ಪ್ರಶಸ್ತಿ ತನ್ನದಾಗಿಸಿತು. ಸಮರ್ಥ ಭಜಕ ಪ್ರಶಸ್ತಿಯನ್ನು ರಂಗ ಮಯೂರಿ ಕಲಾ ಶಾಲೆ ಸುಳ್ಯ ಪಡೆಯಿತು. ವಿಶ್ವ ಕರ್ಮ ಭಜನಾ ಸಂಘ ಮುರೂರು ಸಮರ್ಥ ಭಜಕರು ಪ್ರಶಸ್ತಿ ಪಡೆದರು.
ಸಂಜೆ ಸಮಾರೋಪ ಸಮಾರಂಭ ನಡೆದಿತ್ತು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಕ್ಷೇತ್ರ ಒಡಿಯೂರು ಇಲ್ಲಿನ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು ಶ್ರೀರಾಮ ಭಜನಾ ಮಂದಿರ ಕಲಾಗ್ರಾಮ ಕಲ್ಮಡ್ಕ ಇದರ ಅಧ್ಯಕ್ಷ ಸಾಯಿ ನಾರಾಯಣ ಕಲ್ಮಡ್ಕ ಅಧ್ಯಕ್ಷತೆ ವಹಿಸಿದ್ದರು
ಶ್ರೀರಾಮ ಭಜನಾ ಮಂದಿರ ಇದರ ಸ್ಥಾಪಕಾಧ್ಯಕ್ಷ ಕೆ ಎನ್ ಪರಮೇಶ್ವರಯ್ಯ, ಶ್ರೀರಾಮ ಸೇವಾ ಟ್ರಸ್ಟ್ ಕಲ್ಮಡ್ಕ ಇದರ ಅಧ್ಯಕ್ಷ ಗೋವಿಂದಯ್ಯ, ಶ್ರೀಮತಿ ಶೀಲಶಂಕರಿ ಗಣಪತಿ ಭಟ್ ಅತಿಥಿಗಳಾಗಿದ್ದರು.
ಸಾರ್ವಜನಿಕ ದೇವತಾರಾಧನಾ ಸಮಿತಿ ಕೊರತ್ತಿಕಲ್ಲು ಇದರ ಅಧ್ಯಕ್ಷ ರವೀಂದ್ರಗೌಡ ಮಾಳಿಗೆ, ಯುವಕ ಮಂಡಲ ಕಳಂಜದ ಅಧ್ಯಕ್ಷ ಶಿವರಾಮ ಕಜೆಮೂಲೆ ವೇದಿಕೆಯಲ್ಲಿದ್ದರು. ಈ ಸಂದರ್ಭ ಹಿರಿಯ ಭಜನಕಾರದ ವೆಂಕಟೇಶ ಪೈ ಬಾಚೋಡಿ, ಶ್ರೀಮತಿ ಮಹಾಲಕ್ಷ್ಮೀ ಪ್ರಕಾಶ್ ಮರ್ಕಂಜ, ಸಂಗೀತ ಕಲಾವಿದ ರಾಮಚಂದ್ರ ಕಾಚಿಲ ಅವರನ್ನು ಸನ್ಮಾನಿಸಲಾಯಿತು. ನಾರಾಯಣ ಕೋಡಿಯಡ್ಕ ಪ್ರಸ್ತಾವಿಕ ಮತನ್ನಾಡಿದರು. ಸಚಿನ್ ಪೆರಿಯಪ್ಪು ವಂದಿಸಿದರು. ಪ್ರಶಾಂತ್ ಕೆ ಕಾರ್ಯಕ್ರಮ ನಿರೂಪಿಸಿದರು. ರಘು ಬಿಜು ಹಾಗೂ ರೇಣುಕಾ ರೈ ಒಡಿಯೂರು ನಿರ್ಣಾಯಕರಾಗಿ ಸಹಕರಿಸಿದರು.