ಬಳ್ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮ ಎಸ್.ರೈ,ಉಪಾಧ್ಯಕ್ಷರಾದ ನೇತ್ರಾವತಿ ಹೊಪ್ಪಾಳೆ,SDMC ಅಧ್ಯಕ್ಷರಾದ ಉಮೇಶ್ ಬುಡೆಂಗಿ,ಉಪಾಧ್ಯಕ್ಷ ರಾದ ಶ್ರೀಮತಿ ಭವ್ಯ,SDMC ನಿಕಟಪೂರ್ವ ಅಧ್ಯಕ್ಷರುಗಳಾದ ಚಂದ್ರಕಾಂತ ಮತಾವು,ರವೀಂದ್ರ ಮುಡ್ಲ,ಬಳ್ಪ ಗ್ರಾ.ಪಂ.PDO ನಾರಾಯಣ ಬಟ್ಟೋಡಿ,ಗ್ರಾ.ಪಂ.ಸದಸ್ಯ ರಾಜೀವ ಕಣ್ಕಲ್ಲು,ಶಾಲಾ ಮು.ಶಿ.ಶ್ರೀಮತಿ ಗಿರಿಜಾ,ಸಹಶಿಕ್ಷಕ ಆನಂದ ವೈ.ಈ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಪಂ.ಅಧ್ಯಕ್ಷರು ನೆರವೇರಿಸಿಕೊಟ್ಟರು.ಮುಖ್ಯ ಶಿಕ್ಷಕರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಲಾಯಿತು.ಶಿಕ್ಷಕ ಆನಂದ ವೈ ಈ ಇಲಾಖಾ ಮಾಹಿತಿಗಳನ್ನು ನೀಡಿದರು.ದಾನಿಗಳಾದ ಎಸ್.ಡಿ.ಎಂ.ಸಿ.ಅಧ್ಯಕ್ಷರು ನೀಡಿದ ನೋಟ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಯಿತು.
ದೈ.ಶಿ.ಶಿಕ್ಷಕಿ ಶ್ರೀಮತಿ ಭಾಗೀರಥಿ ಸ್ವಾಗತಿಸಿ,ಶಿಕ್ಷಕಿ ಶ್ರೀಮತಿ ಗುಲಾಬಿ ಎ ವಂದಿಸಿದರು.ಶಿಕ್ಷಕಿ ಶ್ರೀಮತಿ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಎಲ್ಲಾ ಎಸ್.ಡಿ.ಎಂ.ಸಿ.ಸದಸ್ಯರು, ಪೋಷಕರು,ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ಲರಿಗೂ ಸಿಹಿಯೂಟ ನೀಡಲಾಯಿತು.