Breaking News

ಜೇಸಿಐ ಪಂಜ ಪಂಚಶ್ರೀ – ಬಹುಘಟಕ ತರಬೇತಿ ಕಾರ್ಯಾಗಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಜೇಸಿಐ ಪಂಜ ಪಂಚಶ್ರೀ ಆತಿಥ್ಯದಲ್ಲಿ ಬಹುಘಟಕ ತರಬೇತಿ ಕಾರ್ಯಾಗಾರ ಮೇ. ೧೫ರಂದು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜರಗಿತು. ಕಾರ್ಯಕ್ರಮವನ್ನು ಜೇಸಿಐ ಭಾರತದ ಪೂರ್ವ ನಿರ್ದೇಶಕ ಚಂದ್ರಶೇಖರ್ ನಾಯರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ೧೫ರ ಪ್ರಾಂತ್ಯ ಸಿ ಯ ಉಪಾಧ್ಯಕ್ಷರಾಗಿರುವ ರವಿಚಂದ್ರ ಪಾಟಾಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಮಾರಸ್ವಾಮಿ ವಿದ್ಯಾಲಯದ ಅಧ್ಯಕ್ಷ ಗಣೇಶ್‌ಪ್ರಸಾದ್ ನಾಯರ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ರಾಷ್ಟ್ರೀಯ ತರಬೇತುದಾರರಾಗಿರುವ ಜಯಪ್ರಕಾಶ್ ನಾಗತಿಹಳ್ಳಿ, ತರಬೇತುದಾರರಾಗಿರುವ ಮನೋಜ್ ಕಡಬ, ಜೇಸಿಐ ಪಂಜ ಪಂಚಶ್ರೀ ಯ ಅಧ್ಯಕ್ಷರಾಗಿರುವ ಶಿವಪ್ರಸಾದ್ ಹಾಲೆಮಜಲು ಹಾಗೂ ಕಾರ್ಯದರ್ಶಿ ಕೌಶಿಕ್ ಕುಳ ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರ ಜಯಪ್ರಕಾಶ್ ನಾಗತಿಹಳ್ಳಿ ಹಾಗೂ ಸಹ ತರಬೇತುದಾರರಾಗಿರುವ ಮನೋಜ್ ಕಡಬ ತರಬೇತಿಯನ್ನು ಜೆಸಿ ಸದಸ್ಯರಿಗೆ ನೀಡಿದರು. ತರಬೇತಿಯಲ್ಲಿ ಪಂಜ, ಬೆಳ್ಳಾರೆ, ಸುಳ್ಯ,ಕಡಬ,ನೆಲ್ಯಾಡಿ, ಬೆಳ್ತಂಗಡಿ, ಸುಬ್ರಮಣ್ಯ ಜೇಸಿ ಘಟಕದ ೫೦ ಕ್ಕಿಂತಲೂ ಹೆಚ್ಚು ಜೇಸಿ ಸದಸ್ಯರು ತರಬೇತಿಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮಕ್ಕೆ ವಲಯ ೧೫ರ ವಲಯಾಧ್ಯಕ್ಷ ರಾಯನ್ ಉದಯ ಕ್ರಾಸ್ತಾ, ವಲಯ ೧೫ರ ವಲಯ ನಿರ್ದೇಶಕರು ಆಗಿರುವ ಪುರುಷೋತ್ತಮ ಶೆಟ್ಟಿ ಹಾಗೂ ಪ್ರಾಂತ್ಯ ಬಿ ಯ ವಲಯ ಉಪಾಧ್ಯಕ್ಷರಾಗಿರುವ ಪ್ರಶಾಂತ್ ಲೈಲಾರವರು ಭೇಟಿ ನೀಡಿ ಕಾರ್ಯಕ್ರಮಕ್ಕೆ ಹಾಗೂ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾದ ಶಿವಪ್ರಸಾದ್ ಹಾಲೆಮಜಲು ಸ್ವಾಗತಿಸಿ, ಕಾರ್ಯದರ್ಶಿ ಕೌಶಿಕ್ ಕುಳ ವಂದಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.