ಸರಕಾರಿ ಪ್ರೌಢಶಾಲೆ ಏನೆಕಲ್ಲು ಇಲ್ಲಿ. ಮೇ.16 ರಂದು ಶಾಲಾ ಪ್ರಾರಂಭೋತ್ಸವ ಮಕ್ಕಳ ಜಾಥಾದೊಂದಿಗೆ ಆರಂಭವಾಯಿತು. ಸಭಾ ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯರಾದ ಮೋಹನ ಕೋಟಿಗೌಡನ ಮನೆ ಇವರು ಉದ್ಘಾಟಿಸಿದರು. ದಾಖಲಾದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್ ಡಿ ಎಂ ಸಿ, ಪೋಷಕರು ಉಪಸ್ಥಿತರಿದ್ದರು.