ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವವು ಕಾರ್ಯಕ್ರಮವು ನಡೆಯಿತು.
ಆಲೆಟ್ಟಿ ಪಂಚಾಯತ್ ಸದಸ್ಯ ಸತ್ಯಕುಮಾರ ಆಡಿಂಜ ಮಕ್ಕಳಿಗೆ ಶಿಕ್ಷಕರಿಗೆ 2022-23 ರ ಶೈಕ್ಷಣಿಕ ವರ್ಷದ ಶುಭಹಾರೈಕೆ ಸಲ್ಲಿಸಿದರು. ಪಂಚಾಯತ್ ಸದಸ್ಯೆ ಭಾಗೀರಥಿ ಪತ್ತುಕುಂಜ ಶುಭಹಾರೈಸಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಕರುಣಾಕರ ದೋಣಿಮೂಲೆ, ಮುಖ್ಯ ಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ ಸ್ವಾಗತಿಸಿದರು .ಶಿಕ್ಷಕಿ ವನಿತಾ ವಂದಿಸಿದರು. ಶಿಕ್ಷಕ ಮಾರುತಿ ಬಸ್ಯನಾಯ್ಕರ, ಶಿಕ್ಷಕಿ ನವ್ಯ ಮತ್ತು ಪ್ರೇಮಾಂಜಲಿ ಸಹಕರಿಸಿದರು.ಎಲ್ಲಾ ಮಕ್ಕಳಿಗೆ ಸಿಹಿತಿಂಡಿ ನೀಡಿ ತರಗತಿಗೆಸ್ವಾಗತಿಸಲಾಯಿತು. ಅದಲ್ಲದೇ ನಿವೃತ್ತ ಮುಖ್ಯ ಶಿಕ್ಷಕಿ ಯಶೋಧ ಗುಂಡ್ಯ ರವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಲಿದ್ದು ಅವರನ್ನು ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಸಂಚಾಲಕರಾದ ಜ್ಞಾನೇಶ್ ಎನ್.ಎ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಸ್ವಾಗತಿಸಿದರು.