ಸ.ಕಿ.ಪ್ರಾ.ಶಾಲೆ ಕೇನ್ಯದಲ್ಲಿ ಶಾಲಾ ಪ್ರಾರಂಭೋತ್ಸವ ಮೇ. 16 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಎಸ್. ಡಿ.ಎಂ.ಸಿ. ಅಧ್ಯಕ್ಷ ಪುಟ್ಟಣ್ಣ ಗೌಡ ಕುಂಜಾತ್ತಾಡಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಳ್ಪ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಕುಸುಮ ಎಸ್ ರೈ, ಗೌರವ ಉಪಸ್ಥಿತರಾಗಿ ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಶ್ರೀಮತಿ ವಿಮಲ ಆರ್. ರೈ, ಅತಿಥಿಗಳಾಗಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ಟೀನಾ ಸಿ, ಪೋಷಕರಾದ ಶಿವಾನಂದ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ದಮಯಂತಿ, ಮುಖ್ಯ ಶಿಕ್ಷಕಿ ರೇವತಿ, ಅತಿಥಿ ಶಿಕ್ಷಕಿ ತುಲಶ್ರಿ, ಗೌರವ ಶಿಕ್ಷಕಿ ಶ್ರೀಮತಿ ಅಂಕಿತಾ ಸೇರಿದಂತೆ ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಕ್ಕಳನ್ನು ಅತ್ಹ್ಮಿಯವಾಗಿ ಸ್ವಾಗತಿಸಲಾಯಿತು. ಈ ದಿನ ಮಕ್ಕಳಿಗೆ ಕುರ್ಚಿ ತರಲು ಕೇನ್ಯ ಶಾಲೆಯ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ವಿಮಲ ರೈ ಕೇನ್ಯ ಹೊಸಮನೆ ಧನ ಸಹಾಯ ನೀಡಿದರು. 1ನೇ ತರಗತಿಗೆ 5 ಮಕ್ಕಳು ದಾಖಲಾಗಿದ್ದಾರೆ, 3 ಮತ್ತು4 ನೆ ತರಗತಿಗೆ ತಲಾ ಒಂದರಂತೆ ದಾಖಲಾಗಿದರು. ಕು. ರೇವತಿ ಸ್ವಾಗತಿಸಿ ಅಂಕಿತಾ ವಂದಿಸಿದರು. ಈ ವರ್ಷ ಸರಕಾರಿ ಶಾಲೆ ಉಳಿಸಿ ಅಭಿಯಾನದಂತೆ ದುರ್ಗಾ ಸೇವಾ ಸಂಘ ಕೇನ್ಯ ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಸಮವಸ್ತ್ರ, ಕೊಡೆ ಇತ್ಯಾದಿಗಳನ್ನು ದಾನಿಗಳ ಸಹಾಯದಿಂದ ನೀಡುವುದಾಗಿ ದೇವಿಪ್ರಸಾದ್ ರೈ ಗೆಜ್ಜೆ ತಿಳಿಸಿದ್ದಾರೆ.