ಗುಡ್ಡನಮನೆ ಕುಟುಂಬದ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನೆಲ್ಲೂರು ಕೆಮ್ರಾಜೆ ಗ್ರಾಮದ ಗುಡ್ಡನಮನೆ ರೇಜಪ್ಪ ಗೌಡರವರ ಮನೆಯಲ್ಲಿ ವೇ| ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಮೇ.12 ಮತ್ತು 13ರಂದು ನಡೆಯಿತು.
ಮೇ.12ರಂದು ವಿವಿಧ ವೈಧಿಕ ಕಾರ್ಯಕ್ರಮ ಗಳು, ಮೇ.13ರಂದು ಗಣಪತಿ ಹೋಮ, ಬ್ರಹ್ಮಕಲಶಪೂಜೆ, ಶ್ರೀ ಧರ್ಮದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ಶಿವಣ್ಣ ಗೌಡ ಗುಡ್ಡನಮನೆ ಹಾಗೂ ಕುಟುಂಬಸ್ಥರು, ಊರವರು, ಬಂಧುಮಿತ್ರರು ಉಪಸ್ಥಿತರಿದ್ದರು. ಮೇ.17 ಮತ್ತು 18ರಂದು ಹರಿಸೇವೆ ಮತ್ತು ದೈವಗಳ ನೇಮೋತ್ಸವ ನಡೆಯಲಿದೆ.