ಆರತಿ ಬೆಳಗಿ, ತಿಲಕವಿಟ್ಟು ವಿದ್ಯಾರ್ಥಿಗಳಿಗೆ ಸ್ವಾಗತ
ಪೋಷಕರ ಆಶೀರ್ವಾದದೊಂದಿಗೆ ಮಕ್ಕಳ ಶೈಕ್ಷಣಿಕ ವರ್ಷಾರಂಭ
ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಶಾಲಾ ಪ್ರವೇಶೋತ್ಸವವು ಇಂದು ಶಾಲೆಯಲ್ಲಿ ನಡೆಯಿತು.
ನೂತನ ಶೈಕ್ಷಣಿಕ ವರ್ಷಾರಂಭ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ವಾದನದೊಂದಿಗೆ ಸ್ವಾಗತ ಕೋರಿದರು. ಆರತಿ ಬೆಳಗಿ, ತಿಲಕವಿಟ್ಟು ಸ್ವಾಗತಿಸಲಾಯಿತು. ಮಕ್ಕಳ ಪೋಷಕರು ಅಕ್ಷತೆ ಹಾಕಿ ಆಶೀರ್ವದಿಸಿದರು. ಮಕ್ಕಳು ಪೋಷಕರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಬಳಿಕ ಭಾರತಾಂಬೆಗೆ ಪುಷ್ಪಾರ್ಚನೆಗೈದು ನಮಸ್ಕರಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ತಳೂರು ಪ್ರವೇಶೋತ್ಸವ ಉದ್ಘಾಟಿಸಿದರು.
ಶಾಲಾ ಸಂಚಾಲಕ ಎ.ವಿ.ತೀರ್ಥರಾಮ, ನಿರ್ದೇಶಕರಾದ ರಾಧಾಕೃಷ್ಣ ಮಾವಿನಕಟ್ಟೆ, ಮಹಾವೀರ ಜೈನ್, ಕೃಷ್ಣಯ್ಯ ಮೂಲೆತೋಟ, ಶಾಲಾ ಮುಖ್ಯ ಶಿಕ್ಷಕ ಗದಾಧರ ಬಾಳುಗೋಡು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಂಜಾನೆ ಶಾಲೆಯಲ್ಲಿ ಗಣ ಹೋಮ ನಡೆಯಿತು.