ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಅಕ್ಷಯ ಸಂಜೀವಿನಿ ಒಕ್ಕೂಟ ಇದರ ವತಿಯಿಂದ ಸೋಪು ಹಾಗೂ ಪಿನಾಯಿಲ್ ತಯಾರಿಕೆ ಹಾಗೂ ಘನತ್ಯಾಜ್ಯ ಮಾಹಿತಿ ಕಾರ್ಯಕ್ರಮವು ಮೇ.16ರಂದು ಪಂಚಾಯತ್ ವಠಾರದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಉಷಾಜಯರಾಮರವರು ಮಾಹಿತಿಯನ್ನು ನೀಡಿದರು. ಹಾಗೂ ಘನ ತ್ಯಾಜ್ಯ ವಿಲೇವಾರಿ ಮಾಹಿತಿಯನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು , ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂಧಿಗಳು ಹಾಜರಿದ್ದರು.