ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಪ್ರಾರಂಭ ದಿನವಾದ ಇಂದು ಪ್ರಾರಂಭೋತ್ಸವ ಅದ್ದೂರಿಯಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿರುವಂತಹ ಯಶವಂತ ರೈ ಇವರು ಹಾಗೆಯೇ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ನಾಯಕ ಇವರು ಸೇರಿದ್ದರು.
ಎಂಟು, ಒಂಭತ್ತು ಹಾಗು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕವನ್ನು ಶಿಕ್ಷಕರಿಂದ ವಿತರಿಸಲಾಯಿತು.
ಹಾಗೆಯೇ ಎಲ್ಲಾ ಶಿಕ್ಷಕರು ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯರು ಆಗಿರುವಂತಹ ಭಾರತಿ ದಿನೇಶ್ ಹೆಚ್ ಎಲ್ ವೆಂಕಟೇಶ್ , ಪೋಷಕರು, ಶಿಕ್ಷಕ ರಕ್ಷಕ ಸಂಘದವರಾಗಿರುವ ದಿನೇಶ್ ಅವರು ಉಪಸ್ಥಿತರಿದ್ದರು.
ವರದಿ :ಅನನ್ಯ ಹೆಚ್ ಸುಬ್ರಹ್ಮಣ್ಯ