ಆಲೆಟ್ಟಿ ಗ್ರಾಮದ ಕುಡೆಕಲ್ಲು ಕಾಲನಿ ನಿವಾಸಿ ಶ್ರೀಧರ ಕುಡೆಕಲ್ಲು ರವರು ಅಲ್ಪ ಕಾಲದ ಅಸೌಖ್ಯದಿಂದ
ಮೇ. 16 ರಂದು ನಿಧನರಾದರು. ಅವರಿಗೆ 27 ವರ್ಷ ವಯಸ್ಸಾಗಿತ್ತು.
ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುವ ದಾರಿ ಮಧ್ಯೆ ಕೊನೆಯುಸಿರೆಳೆದರು.
ಮೃತರು ಅವಿವಾಹಿತ ರಾಗಿದ್ದು ತಾಯಿ ಮತ್ತು ಸಹೋದರ ವಸಂತ ಕುಡೆಕಲ್ಲು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಇವರು ಆಲೆಟ್ಟಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪದಾದಿಕಾರಿಯಾಗಿದ್ದರು.