ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ಮೇ.16ರಂದು ನಡೆಯಿತು. ಈ ವೇಳೆ ಪುಟಾಣಿಗಳಿಗೆ ಆರತಿ ಬೆಳಗಿ,ಪುಷ್ಪವೃಷ್ಟಿ ಮಾಡಿ,ಸಿಹಿ ತಿಂಡಿ ನೀಡಿ ಸ್ವಾಗತಿಸಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ದೀಪ ಬೆಳಗಿಸಿ ಶುಭಹಾರೈಸಿದರು.ಎಸ್ .ಡಿ.ಎಂ ಸಿ ಅಧ್ಯಕ್ಷ ಸೋಮಶೇಖರ ನೇರಳ ಸಭಾಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಚಂದ್ರಶೇಖರ ದೇರಾಜೆ,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಾಮೋದರ ನೇರಳ,ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾಕುಮಾರಿ, ಎಸ್ ಡಿ ಎಂ ಸಿ ಸದಸ್ಯರಾದ ದೇವಿಪ್ರಸಾದ್ ಜಾಕೆ, ಪುರುಷೋತ್ತಮ, ಚೆನ್ನಕೇಶವ ಆಚಾರ್ಯ,ಸತ್ಯನಾರಾಯಣ ಶ್ರೀಮತಿ ಧನಲಕ್ಷ್ಮಿ, ರಮ್ಲತ್ ,
ಶ್ರೀಮತಿ ಪ್ರಮೀಳ,ಶ್ರೀಮತಿ ನಮಿತ,ಶ್ರೀಮತಿ ಸೌಮ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶ್ರೀಮತಿ ಭುವನೇಶ್ವರಿ,ಶ್ರೀಮತಿ
ನೇತ್ರಾವತಿ ಮತ್ತು ಶ್ರೀಮತಿ
ಜಯಶ್ರೀ ತರಗತಿವಾರು ಪಠ್ಯ ಕ್ರಮಗಳನ್ನು ವಿವರಿಸಿದರು.ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸುಷ್ಮಾ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ನೇತ್ರಾವತಿ ವಂದಿಸಿದರು.