ಪೆರುವಾಜೆ : .ಪ್ರಾಥಮಿಕ‌ ಶಾಲಾ ಪ್ರಾರಂಭೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸ.ಹಿ.ಪ್ರಾ.ಶಾಲೆ ಪೆರುವಾಜೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ. ನಿವೃತ್ತ ಶಿಕ್ಷಕಿ ಶ್ರೀಮತಿ ಸುಭದ್ರಾ ಅವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ನೂತನ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್ ಇವರನ್ನು ಸ್ವಾಗತಿಸಿ , ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಲಲಿತ ಕುಮಾರಿಯವರು ಅಧಿಕಾರ ಹಸ್ತಾಂತರಿಸಿದರು.
ಕಲಿಕಾ ನಿರಂತರತೆ ಯನ್ನು ಕಾಪಾಡುವ ಉದ್ದೇಶದಿಂದ ಶಾಲೆಯು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಹಲವಾರು ಆಸಕ್ತಿದಾಯಕ ಇಂಗ್ಲಿಷ್ ಚಟುವಟಿಕೆಗಳನ್ನು ನೀಡಿದ್ದು ಈ ಸಂದರ್ಭದಲ್ಲಿ ಬಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಉದಯಗಣೇಶ ಅರ್ನಾಡಿ, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸುಭದ್ರಾ ವಿ. ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ, ಸಮುದಾಯ ಆರೋಗ್ಯ ಅಧಿಕಾರಿಯಾದ ಕುಮಾರಿ ರಚನ, ಶಾಲಾ ಮುಖ್ಯೋಪಾಧ್ಯಾಯರಾದ . ತೇಜಪ್ಪ ಎಸ್. ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ.ಸದಸ್ಯರು, ಪೋಷಕರು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾದ ಶ್ರೀ ಪದ್ಮನಾಭ ಶೆಟ್ಟಿ ಯವರು ಶಾಲೆಯಲ್ಲಿ ಆಂಗ್ಲ ಮಾದ್ಯಮ ತರಗತಿಗಳನ್ನು ಹಾಗೂ ಸ್ಮಾರ್ಟ್ ಕ್ಲಾಸ್ ಆರಂಭಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.