Breaking News

ಮಂಡೆಕೋಲು ಗ್ರಾಮ ಲಂಚ ಭ್ರಷ್ಟಾಚಾರ ಮುಕ್ತ ಗ್ರಾಮದ ಸಂಕಲ್ಪ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸಾಮಾನ್ಯ ಸಭೆಯಲ್ಲಿ ಪಂಚಾಯತ್ ಸದಸ್ಯರು, ಸಿಬ್ಬಂದಿಗಳಿಂದ ಘೋಷಣೆ

ಕೆಲಸಕ್ಕಾಗಿ ಅಧಿಕಾರಿಗಳು ಹಣ ಪಡೆದಿದ್ದರೆ ಗ್ರಾ.ಪಂ. ಸದಸ್ಯರಿಗೆ ತಿಳಿಸಿ ; ಹಣ ವಾಪಸ್ ತೆಗೆಸಿಕೊಡುವುದಾಗಿ ಪಂಚಾಯತ್ ನಿರ್ಣಯ

ಮಂಡೆಕೋಲು ಗ್ರಾಮವನ್ನು ಲಂಚ ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿಗಳು ಘೋಷಣೆ ಮಾಡಿದ್ದಾರೆ.
ಮೇ.೧೭ರಂದು ನಡೆದ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಸಂಕಲ್ಪ ಕೈಗೊಳ್ಳಲಾಗಿದೆ.
ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು ವಹಿಸಿದ್ದರು. ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ಶ್ರೀಮತಿ ಪ್ರಶಾಂತಿ, ಪ್ರತಿಮಾ ಹೆಬ್ಬಾರ್, ದಿನೇಶ್ ಅಕ್ಕಪ್ಪಾಡಿ, ನಾರಾಯಣ ಕೆದ್ಕಾರ್, ಶ್ರೀಮತಿ ದಿವ್ಯಲತಾ ಚೌಟಾಜೆ, ಶ್ರೀಮತಿ ತಿಲಕ ಕುತ್ಯಾಡಿ, ರಾಧಿಕಾ ಮೈತಡ್ಕ, ತಾರನಾಥ ಕೊಡೆಂಚಿಕಾರ್, ಶಶಿಕಲಾ ಕುಂಟಿಕಾನ, ಕುಶಲ ಉದ್ದಂತಡ್ಕ, ಶ್ರೀಮತಿ ಉಷಾ ಗಂಗಾಧರ್, ಶ್ರೀಮತಿ ಗೀತಾ, ಪಿ.ಡಿ.ಒ. ರಮೇಶ್ ಪೆರಾಜೆ, ಸಿಬ್ಬಂದಿಗಳಾದ ಬಾಲಕೃಷ್ಣ ಮಾವಂಜಿ, ಮೋಹಿತ್ ಪೇರಾಲು, ಅನಂತ ಕನ್ಯಾನ, ಸಂತೋಷ್ ಇದ್ದರು.


ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲುರವರು ಸುದ್ದಿ ಜನಾಂದೋಲನ ವೇದಿಕೆಯವರು ನಡೆಸುತ್ತಿರುವ ಲಂಚ ಭ್ರಷ್ಟಚಾರದ ವಿರುದ್ಧದ ಆಂದೋಲನಕ್ಕೆ ನಾವು ಕೈ ಜೋಡಿಸೋಣ. ಜತೆಗೆ ನಮ್ಮ ಗ್ರಾಮವನ್ನು ಲಂಚ ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡೋಣ ಎಂದು ವಿಷಯ ಪ್ರಸ್ತಾಪಿಸಿದರು. ಅಧ್ಯಕ್ಷರ ಮಾತಿಗೆ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದರು. ಬಳಿಕ ಈ ಕುರಿತು ನಿರ್ಣಯ ಬರೆಯಲಾಯಿತು. ಅದರಂತೆ ಮಂಡೆಕೋಲು ಸಹಕಾರ ಸಂಘ, ಗ್ರಾಮದ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರ ಪ್ರಮುಖರನ್ನು ಕರೆದು ಈ ಕುರಿತು ಸಮಾಲೋಚನೆಗೆ ನಿರ್ಧರಿಸಲಾಯಿತು. ತಾಲೂಕಿನ ಯಾವುದೇ ಕಚೇರಿಗಳಲ್ಲಿ ಕೆಲಸ ಆಗಲು ಅಧಿಕಾರಿಗಳು ಅವರಾಗೇ ಹಣದ ಬೇಡಿಕೆ ಇಟ್ಟರೆ ಅದನ್ನು ಆ ವ್ಯಕ್ತಿ ಪಂಚಾಯತ್ ನ ಸದಸ್ಯರಿಗೆ ತಿಳಿಸಬೇಕು. ಮತ್ತು ಅಧಿಕಾರಿ ಹಣ ಪಡೆದಿದ್ದರೆ ಅದನ್ನು ತೆಗೆಸಿಕೊಡುವುದಾಗಿ ಅಧ್ಯಕ್ಷರು ಹೇಳಿದರು. ಕೆಲಸಕ್ಕೆ ಸರಕಾರ ನಿಗಧಿ ಪಡಿಸಿದ ಅವಧಿಗಿಂತ ಹೆಚ್ಚು ಕಾಲ ಕಾರಣವಿಲ್ಲದೆ ಸತಾಯಿಸುವುದು ಕಂಡು ಬಂದರೆ ಅವರನ್ನು ಪ್ರಶ್ನಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಆದರೆ ಕಾನೂನಿನ ಅಡೆತಡೆಗಳಿದ್ದು ತೊಡಕಾಗಿದ್ದರೆ ಆ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಮುಂದಿನ ಸಾಲಿನ ಕ್ರಿಯಾಯೋಜನೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ೬೨ ಎಕ್ರೆ ಸರಕಾರ ಜಾಗಕ್ಕೆ ಅರಣ್ಯದ ಆಕ್ಷೇಪವಿರುವ ಕುರಿತು ಚರ್ಚೆಯಾಗಿ ಅದನ್ನು ಎ.ಸಿ.ಯವರಿಗೆ ಬರೆಯಲು ನಿರ್ಧರಿಸಲಾಯಿತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.