ಅಜ್ಜಾವರ ಗ್ರಾಮದ ಅಡ್ಪಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಮಳೆಬಿಲ್ಲು ಕಾರ್ಯಕ್ರಮಕ್ಕೆ ಮೇ.16 ರಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ಅಶ್ರಫ್ ಸ-ಹದಿ ವಹಿಸಿದ್ದರು. ಕಲಿಕಾಚೇತರಿಕೆಗೆ ಪೂರಕವಾಗಿ ಬಲೂನ್ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಾಹುಲ್ ಅಡ್ಪಂಗಾಯ ಉಪಸ್ಥಿತರಿದ್ದರು. ಶೈಕ್ಷಣಿಕ ವರ್ಷದ ಶಾಲಾ ಮಾಹಿತಿಯನ್ನು ಶಾಲಾ ಮುಖ್ಯಗುರು ಶ್ರೀಮತಿ ಧನಲಕ್ಷ್ಮಿ ಕುದ್ಪಾಜೆ ವಿವರಿಸಿದರು. ಶ್ರೀಮತಿ ರಾಜೀವಿ ಅವರು ಕಲಿಕ ಚೇತರಿಕೆ ಮತ್ತು ವಿದ್ಯಾ ಪ್ರವೇಶದ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಿದರು. ಸಹಶಿಕ್ಷಕಿ ಶ್ರೀಮತಿ ಸುಗಂಧಿ ಸ್ವಾಗತಿಸಿದರು. ಶ್ರೀಮತಿ ಸುರೇಖ ರೈ ಕಾರ್ಯಕ್ರಮ ನಿರೂಪಿಸಿದರು.