ಕಾರ್ಮಿಕ ಇಲಾಖೆಯ ಮೂಲಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಲ್ಯಾಣ ಮಂಡಳಿ ವತಿಯಿಂದ ನಡೆಸಲಾಗುತ್ತಿರುವ ತರಬೇತಿ ಹಾಗೂ ಉಚಿತ ತಪಾಸಣೆ ಕಾರ್ಯಕ್ರಮ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮೇ. 17 ರಂದು ನಡೆಯಿತು.
ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿ.ಸೋಜಾ, ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಸವಾದ್, ಎಸ್. ಕೆ. ಹನೀಫ್, ಅನುಪಮಾ, ಕಾರ್ಮಿಕ ಘಟಕದ ಪ್ರಸಾದ್, ಶ್ರೀಧರ್, ವಿಜಯ ಅಲಡ್ಕ, ಸುಶೀಲಾ, ಅರೋಗ್ಯ ಇಲಾಖೆಯವರು ಉಪಸ್ಥಿತರಿದ್ದರು.
ನೂರಾರು ಜನ ಯೋಜನೆಯ ಸದುಪಯೋಗ ಪಡೆದುಕೊಂಡರು. ಯೋಜನೆಯ ಬಗ್ಗೆ ಜಿಲ್ಲಾ ಸಂಯೋಜಕ ಪಿ.ವಿ
ಸುಬ್ರಮಣಿ ಮಾಹಿತಿಯನ್ನು ನೀಡಿದರು.