ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾನಡ್ಕ ಇಲ್ಲಿ ಶಾಲಾ ಪ್ರಾರಂಭೋತ್ಸವವನ್ನು ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಶಾಲಾ ಪ್ರಾರಂಭೋತ್ಸವ ಉದ್ಘಾಟನೆಯನ್ನು 1 ನೇ ತರಗತಿ ದಾಖಲಾದ ಮಕ್ಕಳು ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಉದಯಕುಮಾರ್ ಬಾನಡ್ಕ ಅವರು ಪ್ರತಿ ವರ್ಷ ಕೊಡಮಾಡುವ ಉಚಿತ ನೋಟ್ಸ್ ಪುಸ್ತಕಗಳನ್ನು ಮಾಜಿ ಸುಬೇದಾರರಾದ ಹಾಗೆಯೇ ದಾನಿಯೂ ಆಗಿರುವ ವಾಸುದೇವ ಬಾನಡ್ಕ ಇವರು ಮಕ್ಕಳಿಗೆ ವಿತರಿಸಲಾಯಿತು.
ಗ್ರಾಮಪಂಚಾಯತ್ ಸದ್ಯಸರಾದ ಶ್ರೀಮತಿ ಭವ್ಯ ಜೇನುಕೋಡಿ ಇವರು ಉದ್ಘಾಟನೆ ಮಾಡಿ ಶುಭ ಹಾರೈಸಿದರು. ವೇದಿಕೆಯನ್ನು ಎಸ್. ಡಿ. ಎಂ. ಸಿ ಅಧ್ಯಕ್ಷರಾದ ವಿಶ್ವನಾಥ ಬಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಚಿನ್ ಕೆ. ಬಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು, ಅತಿಥಿ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು