ತಾಲೂಕಿನ 6 ಸರಕಾರಿ ಶಾಲೆಗಳಿಗೆ ಪುಸ್ತಕಗಳ ವಿತರಣೆ
ಸುಳ್ಯದ ಕ್ಷೇತ್ರ ಸಂಪನ್ಮೂಲ ಕೇಂದ್ರ ಇಲ್ಲಿ ಅಭ್ಯುದಯ ಮತ್ತು ಸಮರ್ಥ ಭಾರತ ಟ್ರಸ್ಟ್ ಜೆ ಪಿ ನಗರ ಬೆಂಗಳೂರು ಇವರ ವತಿಯಿಂದ ಸುಳ್ಯ ತಾಲೂಕಿನ 6 ಶಾಲೆಗಳಿಗೆ ನೋಟ್ ಪುಸ್ತಕ, ಗ್ರಂಥಾಲಯ ಪುಸ್ತಕ ಹಾಗೂ ಕಂಪ್ಯೂಟರ್ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್ ಪಿ ವಹಿಸಿದ್ದರು.
ಸಮರ್ಥ ಭಾರತ ಟ್ರಸ್ಟ್ ನ ಟ್ರಸ್ಟಿಗಳಾದ ಪ್ರತಾಪ್ ಪರಾಶರ, ಗಣೇಶ್, ಶ್ರೀವತ್ಸ ಮತ್ತು ಪ್ರಸನ್ನ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು ಕೆ ಉಪಸ್ಥಿತರಿದ್ದರು. ಸ.ಹಿ.ಪ್ರಾ.ಶಾಲೆ ಕೋಲ್ಚಾರು, ಸ.ಉ.ಹಿ.ಪ್ರಾ.ಶಾಲೆ ಶಾಂತಿನಗರ, ಸ.ಪ್ರೌ.ಶಾಲೆ ಎಲಿಮಲೆ, ಸ.ಪ್ರೌ.ಶಾಲೆ ಎಣ್ಮೂರು, ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲ, ಶ್ರೀ ಶಾರದಾ ಪ್ರೌಢಶಾಲೆ ಬೊಳ್ಳಾಜೆ ಶಾಲೆಗಳಿಗೆ ಸುಮಾರು 2 ಲಕ್ಷದವರೆಗಿನ ಪುಸ್ತಕಗಳನ್ನು ವಿತರಿಸಲಾಯಿತು.