ಮಂಡೆಕೋಲು ಶಾಲಾ ಪ್ರಾರಂಭೋತ್ಸವ ಮೇ.16 ರಂದು ನಡೆಯಿತು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭವ್ಯ ಮಂಡೆಕೋಲು, ಗ್ರಾ.ಪಂ. ಸದಸ್ಯರಾದ ಪ್ರಶಾಂತಿ ಮಂಡೆಕೋಲು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕಿ ಮಂಜುಳಾರವರು ಶೈಕ್ಷಣಿಕ ವರ್ಷದ ಮಾಹಿತಿ ನೀಡಿದರು. ಶಿಕ್ಷಕ ಮಧುಸೂದನ್ ಕಲಿಕಾ ಚೇತರಿಕೆಯ ಮಾಹಿತಿ ನೀಡಿದರು.
ಶಿಕ್ಷಕಿ ಅನುಶ್ರೀ ಸ್ವಾಗತಿಸಿದರು. ಶಿಕ್ಷಕಿ ಪ್ರಮೀಳಾ ವಂದಿಸಿದರು. ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು. ಮಳೆ ಬಿಲ್ಲು ಕಾರ್ಯಕ್ರಮದ ಅಂಗವಾಗಿ ಆಟಗಳನ್ನು ಮಕ್ಕಳಿಗೆ ಆಡಿಸಲಾಯಿತು.