ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜೆಜೆಎಮ್ ಕುಡಿಯುವ ನೀರಿನ ಬಗ್ಗೆ ಚರ್ಚೆ ನಡೆಯಿತು. ಕುಡಿಯುವ ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಕೆ ಹಾಗೂ ದರ ನಿಗದಿ ಪಡಿಸಲಾಯಿತು. ಸಾಮಾನ್ಯ ಕೆಟಗರಿಗೆ ೧೦೦೦ ಹಾಗೂ ಪರಿಶಿಷ್ಟ ಜಾತಿ ಪಂಗಡದ ಮನೆಗಳಿಗೆ ೫೦೦ , ಜೂನ್ ತಿಂಗಳಲ್ಲಿ ಮನೆ ತೆರಿಗೆ ಪಾವತಿ ಮಾಡುವವರಿಗೆ ರಿಯಾಯಿತಿ, ಜೂನ್ ನಂತರ ಪಾವತಿಗೆ ದಂಡನೆ, ಕ್ಲಪ್ತ ಸಮಯದಲ್ಲಿ ವ್ಯಾಪಾರ ಪರವಾನಿಗೆ ನವೀಕರಣ, ಅನುಮತಿ ಇಲ್ಲದೆ ಕಟ್ಟಡ ನಿರ್ಮಾಣ ಆವರಣ ಗೋಡೆ ನಿರ್ಮಿಸುವಂತಿಲ್ಲ, ಮಳೆ ಆರಂಭವಾಗಿರುವ ಹಿನ್ನಲೆ ಸಾಂಕ್ರಾಮಿಕ ರೋಗ ಭಾರದಂತೆ ಮುನ್ನೆಚ್ಚರಿಕೆ ಕೊಳಚೆ ವಸ್ತು, ಬೊಂಡ, ಬಾಟ್ಲಿ, ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸಲು ತಪ್ಪಿದಲ್ಲಿ ದಂಡನೆ ವಿಧಿಸಲು ಪಿಡಿಒಗೆ ಅಧಿಕಾರ ನೀಡಲಾಯಿತು. ಸರಕಾರದ ನಿಯಮವಳಿ ಪ್ರಕಾರ 9-11 ಸಂದರ್ಭ ಖಾಲಿ ಜಾಗ ತೆರಿಗೆ ವಿಧಿಸಬೇಕಾಗಿದ್ದು ೦.೮ ರಿಂದ.೦.೫ ಕ್ಕೆ ಇಳಿಸಲು ತೀರ್ಮಾನಿಸಲಾಯಿತು. ಹಲವು ವರ್ಷಗಳಿಂದ ತೆರಿಗೆ ಬಾಕಿ ಇರುವವರಿಗೆ ದಂಡನೆ ವಿಧಿಸುವುದು, ಗ್ರಾಮದ ರಸ್ತೆ ಚರಂಡಿ ಒತ್ತುವರಿ ಮಾಡಿದಲ್ಲಿ ಕಠಿಣ ಕ್ರಮ ಹಾಗೂ ಅನುಮತಿ ಪಡೆಯದೇ ಮನೆ, ಕಟ್ಟಡ, ಆವರಣ ಗೋಡೆ ನಿರ್ಮಾಣ ಕಂಡು ಬಂದಲ್ಲಿ ಪಿಡಿಒ ಗೆ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಯಿತು.
ಪ್ರಾಕೃತಿಕ ವಿಕೋಪ ಸಂದರ್ಭ ಮುನ್ನೆಚ್ಚರಿಕೆ ವಹಿಸುವುz, ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಮೇ. ೨೦ ರಂದು ಕಾರ್ಯಕ್ರಮ ಕ್ಕೆ ಸಿದ್ಧತೆ ವಿಚಾರ ಚರ್ಚೆ, ಕೆಲವು ರಸ್ತೆ ಅತಿಕ್ರಮಣ, ಹಾಗೂ ಚರಂಡಿ ಮೇಲೆ ಅಕ್ರಮವಾಗಿ ಕಲ್ಲು ಕಟ್ಟಿರುವ ಬಗ್ಗೆ ತೀವ್ರ ಚರ್ಚೆ ನಡೆದು ನೋಟೀಸ್ ನೀಡಿ ತೆರವು ಮಾಡಲು ತೀರ್ಮಾನಿಸಲಾಯಿತು. ರಸ್ತೆ ಬದಿ ಮಣ್ಣು ತುಂಬಿಸಿ ಗಿಡ ಗಂಟಿ ಹಾಕಿ ಸಂಚಾರಕ್ಕೆ ತೊಂದರೆ ಕೊಟ್ಟಲ್ಲಿ ಅವರ ಖರ್ಚಿನಲ್ಲೇ ತೆರವುಗೊಳಿಸುವುದಾಗಿ ತೀರ್ಮಾನಿಸಲಾಯಿತು. ಸಾರ್ವಜನಿಕ ದೂರುಗಳಿಗೆ ನೋಟೀಸ್ ನೀಡುವುದು. ಗ್ರಾಮ ಸಭೆಯಲ್ಲಿ ಬಂದ ಅರ್ಜಿಗಳನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದು. ಕಾಮಗಾರಿ ಅನುಷ್ಠಾನ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸೋಮಶೇಖರ್ ಕೊಯಿಂಗಾಜೆ, ಜಗದೀಶ್ ರೈ, ಸುಂದರಿ ಮುಂಡಡ್ಕ, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ಸವಾದ್, ವಿಮಲಾ ಪ್ರಸಾದ್, ಅನುಪಮಾ, ವಿಜಯ, ಸುಶೀಲ, ರಜನಿ, ಉಪಸ್ಥಿತರಿದ್ದರು ಪಿಡಿಒ ಸರಿತಾ ಡಿಸೋಜಾ ಸ್ವಾಗತಿಸಿ, ಗೋಪಮ್ಮ ಲೆಕ್ಕ ಪತ್ರ ಮಂಡಿಸಿದರು. ಅಧ್ಯಕ್ಷರು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.