ಕೆ.ವಿ.ಜಿ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಮೇ ೧೭ರಂದು ಆಚರಿಸಲಾಯಿತು. ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಮೆಡಿಸಿನ್ ವಿಭಾಗದ ಪ್ರೊ. ಡಾ. ಸಿ ರಾಮಚಂದ್ರ ಭಟ್ ಅವರು ಅಧಿಕ ರಕ್ತದೊತ್ತಡದಿಂದ ಆಗುವ ದುಷ್ಪಾರಿಣಾಮಗಳು, ಅಗತ್ಯತೆಗೆಳು, ಅದನ್ನು ನಿಯಂತ್ರಣ ಮಾಡುವ ಕ್ರಮ ಹಾಗೂ ಅದನ್ನು ಪರಿಣಾಮಕಾರಿಯಾಗಿ ಹೇಗೆ ತಡೆಹಿಡಿಯಲು ಸಾಧ್ಯ ಎಂಬುದರ ಬಗ್ಗೆ ಉಪನ್ಯಾಸ ನೀಡಿದರು. ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ ಮೌಲಿಕ ಸಿದ್ಧಾಂತ ವಿಭಾಗ ಮುಖ್ಯಸ್ಥರಾದ ಡಾ. ಎಸ್. ಜಿ. ಕುಲಕರ್ಣಿ ಹೂ ಗುಚ್ಛವನ್ನು ನೀಡಿ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು, ಪದವಿ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಕು. ಸ್ಮಿತಾ ಮತ್ತು ಕು. ಶರಧಿ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಕು. ನೇಹ ಎಸ್. ಹಾಗೂ ಕು. ಪ್ರತೀಕ್ಷಾ ನಿರೂಪಿಸಿ, ವಂದಿಸಿದರು.