ಮಳೆ ನೀರು ನಿಂತು ಸವಾರರಿಗೆ ತೊಂದರೆ
ಸುಳ್ಯ ನಗರದ ವಿವೇಕಾನಂದ ವೃತ್ತ ಹತ್ತಿರ ಅಜ್ಜಾವರ ರಸ್ತೆಯಲ್ಲಿ ತಿಂಗಳುಗಳ ಹಿಂದೆ ಮೆಸ್ಕಾಂ ವತಿಯಿಂದ ಕೇಬಲ್ ಪೈಪ್ ಲೈನ್ ಕಾಮಗಾರಿ ನಡೆದಿದ್ದು ರಸ್ತೆ ಯನ್ನು ಆಗೆಯಲಾಗಿತ್ತು. ಕೆಲಸ ಮುಗಿದ ನಂತರ ಮಣ್ಣು ಹಾಕಿ ರಸ್ತೆ ಮುಚ್ಚಿದ್ದರು. ಈ ಬಾರಿಯ ಮಳೆ ನೀರಿಗೆ ಮಣ್ಣು ಹೋಗಿ ರಸ್ತೆಯಲ್ಲಿಮತ್ತೆ ಗುಂಡಿಯಾಗಿದೆ.
ಈ ಸ್ಥಳದಲ್ಲಿ ದೊಡ್ಡ ಹೊಂಡ ಉಂಟಾಗಿದ್ದು ನೀರು ನಿಂತಿದ್ದು ಸಾರ್ವಜನಿಕರಿಗೆ , ವಾಹನ ಸವಾರರಿಗೆ ತುಂಬಾ ಕಷ್ಟಕರವಾಗಿದೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಗಮನಹರಿಸಬೇಕೆಂದು ಸಾರ್ವಜನಿಕರು ವಿನಂತಿಸಿಕೊಂಡಿದ್ದಾರೆ.
ಈ ಬಗ್ಗೆ ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್ ರಲ್ಲಿ ವಿದ ವಿಚಾರಿಸಿದಾಗ ಅದು ನಮ್ಮ ವ್ಯಾಪ್ತಿಗೆ ಬರುತ್ತದೆ. ಗುತ್ತಿಗೆದಾರರು ಅಂದು ರಸ್ತೆ ಮುಚ್ಚಿದ್ದರು. ಈಗ ಗುಂಡಿಯಾಗಿದ್ದರೆ ಪರಿಶೀಲನೆ ನಡೆಸಿ, ಗುತ್ತಿಗೆದಾರರಿಗೆ ಹೇಳಿ ಸರಿಪಡಿಸುತ್ತೇವೆ ಎಂದುಹೇಳಿದರು.